ದಾವಣಗೆರೆ, ಮೇ 19- ನಗರದ ಡಿಆರ್ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದಿಂದ ಇತ್ತಿಚೇಗೆ ಪಂಪ್ ಹಾಗೂ ಉಪಕರಣಗಳ ತಂತ್ರಜ್ಞರಿಗೆ ಇಂಧನ ದಕ್ಷತಾ ಕ್ರಮಗಳ ಬಗ್ಗೆ ತಾಂತ್ರಿಕ ತರಬೇತಿ ನಡೆಯಿತು. ರಚನಾ ಎನರ್ ಕೇರ್ ಗ್ರೂಪ್ನ ರಾಜೀವ್ ಪಿ. ನಾಡಿಗ್ ಮತ್ತು ರಾಮ್ ಗೋಪಾಲ್ ಅವರು ಇಂಧನ ದಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಸಿ. ಆರ್. ವಿಶ್ವೇಶ್ವರ, ವಿದ್ಯುತ್ ವಿಭಾಗದ ಮುಖ್ಯಸ್ಥ ಎಚ್. ಕೆ. ಮಂಜಪ್ಪ, ಉಪನ್ಯಾಸಕ ಎಂ. ಬಿ. ಪ್ರಹ್ಲಾದ, ಎಸ್.ಎನ್. ದಿವ್ಯಶ್ರೀ, ರೇಣುಕಾ ಇದ್ದರು.
January 2, 2025