ದಾವಣಗೆರೆ, ಮೇ 19- ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಎಕ್ಸ್‌ಪೋ 2024 ಆಯೋಜಿಸಲಾಗಿತ್ತು.
ಅತಿಥಿಗಳಾಗಿ ಆಗಮಿಸಿದ್ದ ಯುಬಿಡಿಟಿಸಿಇ ಪ್ರಾಂಶುಪಾಲ ಡಾ. ಡಿ.ಪಿ. ನಾಗರಾಜಪ್ಪ ಮಾತನಾಡಿ, ತ್ವರಿತಗತಿಯಲ್ಲಿ ಫಲಿತಾಂಶ ನಿಡುವುದರಲ್ಲಿ ವಿಶ್ವವಿದ್ಯಾಲಯ ಪರಿಶ್ರಮಿಸುತ್ತಿದೆ ಎಂದು ಹೇಳಿದರು.
ಜೈನ್ ಸಮೂಹದ ಸಲಹೆಗಾರರಾದ ಮಂಜಪ್ಪ ಸಾರಥಿ ಮಾತನಾಡಿ, ಇನ್ನೋವೇಟಿವ್ ಪ್ರಾಜೆಕ್ಟ್‌ಗಳನ್ನು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚನೆ ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್, ಸಂಚಾಲಕರಾದ ಡಾ. ಆರ್.ಎಸ್. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.