ಶಿಕ್ಷಣದ ಸಹಾಯದಿಂದ ಸಮಾಜ ತಿದ್ದಬೇಕು

ಶಿಕ್ಷಣದ ಸಹಾಯದಿಂದ ಸಮಾಜ ತಿದ್ದಬೇಕು

ದಾವಣಗೆರೆ, ಮೇ 19- ಇಲ್ಲಿನ ರಾಘವೇಂದ್ರ ಹೈಟೆಕ್ ಪಿಯು ಕಾಲೇಜು, ಶ್ರೀ ಶಾರದಾ ಮೆಡಿಕಲ್ ಅಕಾಡೆಮಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್. ದೇವರಾಜ್ ಮಾತನಾಡಿ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು  ಶಿಕ್ಷಣದ ಸಹಾಯದಿಂದ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಆಯುಧ ಆಗಬೇಕು ಎಂದರು.

ನಗರಗಳ ಬೆಳವಣಿಗೆಯಿಂದ ಕೃಷಿ ಭೂಮಿ ನಾಶವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ ಮಾತನಾಡಿ, ಕನ್ನಡ ಮಾಧ್ಯಮ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧೆಗಿಳಿದು ಹೆಚ್ಚು ಅಂಕ ಗಳಿಸಿದ್ದಾರೆ ಎಂದರು.

ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.80 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತಿರ್ಣರಾಗಿ ಕಾಲೇಜಿಗೆ  ಉತ್ತಮ ಹೆಸರು ತಂದಿದ್ದಾರೆ ಎಂದರು.

ರಾಜ್ಯಕ್ಕೆ 10ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಕೆ.ಎಂ. ಸಿಂಚನಾ ಮಾತನಾಡಿ, ಸಾಧನೆ ಮಾಡಲು ಛಲ ಮತ್ತು ಗುರಿ ಮುಖ್ಯ. ಈ ಎರಡೂ ಅಂಶಗಳು ನಮ್ಮ ಕಾಲೇಜಿನಲ್ಲಿ ಸಿಕ್ಕಿದೆ. ಆದ್ದರಿಂದ ಉತ್ತಮ ಅಂಕ ಗಳಿಸಿದ್ದೇನೆ ಎಂದರು.

ಕನ್ನಡ ಉಪನ್ಯಾಸಕ ಎಂ.ಆರ್. ಹರೀಶ್ ನಿರೂಪಿಸಿದರು. ರಸಾಯನಶಾಸ್ತ್ರ ಉಪನ್ಯಾಸಕರಾದ ಎಸ್‌.  ನಿಶ್ಚಿತಾ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಆರ್.ಎಲ್. ನಮಿತಾ ವಂದಿಸಿದರು.‌

error: Content is protected !!