ದಾವಣಗೆರೆ, ಮೇ 19- ಇಲ್ಲಿನ ಸರಸ್ವತಿ ಬಡಾವಣೆಯ ನಿವಾಸಿ ಎನ್. ಶ್ಯಾಮ್ ಅವರು ಕೃಷಿ ಮಾರಾಟ ಇಲಾಖೆಯಲ್ಲಿ ಜಿಲ್ಲಾ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ್ದರಿಂದ ಇಲ್ಲಿನ ಉದ್ಯಾನವನ ಅಭಿವೃದ್ಧಿ ಸಮಿತಿ ಅವರನ್ನು ಸನ್ಮಾನಿಸಿತು.
ಸಮಿತಿಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಮಾತನಾಡಿ, ಎನ್. ಶ್ಯಾಮ್ ಅವರು ಪಂಚಮುಖಿ ಉದ್ಯಾನವನದ ಗಿಡ ಸಂರಕ್ಷಿಸಲು ಟ್ರೀ ಗಾರ್ಡ್ ಕೊಡಿಸುವ ಮೂಲಕ ಪರಿಸರ ಕಾಳಜಿ ತೋರಿದ್ದಾರೆ ಎಂದು ಹೇಳಿದರು.
ಮೊದಲು ಭಾರತೀಯ ಭೂದಳದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಶ್ಯಾಮ್ ಅವರು ಕರ್ನಾಟಕಕ್ಕೆ ಹಿಂದಿರುಗಿ ಕೃಷಿ ಮಾರಾಟ ಇಲಾಖೆಗೆ ಸೇರಿದರು ಎಂದರು.
ಈ ವೇಳೆ ಸಮಿತಿಯ ಗೌರವಾಧ್ಯಕ್ಷ ಎಂ. ಸೋಮಶೇಖರಪ್ಪ, ಹಿರಿಯ ಉಪಾಧ್ಯಕ್ಷ ಜಿ. ಚೌಡಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಪರಮೇಶ್ವರಪ್ಪ, ಶೇಖರಪ್ಪ, ವಿರೂಪಾಕ್ಷಪ್ಪ, ಜಯಾನಾಯ್ಕ, ದೇವೇಂದ್ರಪ್ಪ, ಚಂದ್ರಣ್ಣ, ನಾರಾಯಣ್, ಡಾ. ಮಂಜುನಾಥ್, ಕುಬೇರಪ್ಪ, ವಿಶ್ವನಾಥ ಕುಲಕರ್ಣಿ, ಕೃಷ್ಣಮೂರ್ತಿ ಇದ್ದರು.