ಮಲೇಬೆನ್ನೂರು, ಮೇ 19- ಜಿಗಳಿ ಗ್ರಾಮದಲ್ಲಿ ಭಾನುವಾರ ವಾಸವಿ ಯುವ ಜನ ಸಂಘದ ವತಿಯಿಂದ ವಾಸವಿ ಅಮ್ಮನವರ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಗಂಗೆ ಪೂಜೆ ನೆರವೇರಿಸಿ, ಕೋಲು ಹೊತ್ತ ಮಹಿಳೆಯರು ವಾಸವಿ ಅಮ್ಮನವರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಜಿಗಳಿ ವಾಸವಿ ಯುವ ಜನ ಸಂಘದ ಅಧ್ಯಕ್ಷ ಬಿಳಸನೂರಿನ ಬಿ.ಟಿ.ಹನುಮಂತ ಶ್ರೇಷ್ಠಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಡಿ.ಆರ್.ಮಧುಸೂದನ್, ವಾಸವಿ ಸಮಾಜದ ಮುಖಂಡರಾದ ಕೆ.ಎಂ.ಮಹಾಭಲೇಶ್, ರಾಘವೇಂದ್ರ, ಮುರುಳಿ, ಮಂಜುನಾಥ್, ಮುರುಗೇಶ್, ಪಿ.ಎಸ್.ನಾರಾಯಣ್, ಕೆ.ಟಿ.ನಾರಾಯಣ್, ಯಲವಟ್ಟಿ ಸುರೇಶ್, ಭಾನುವಳ್ಳಿಯ ಬಾಬು, ರಮೇಶ್, ಗೋವಿಂದಪ್ಪ, ಕುಣೆಬೆಳಕೆರೆಯ ರಾಮು, ಶ್ರೀಧರ್, ನಂದಿಗಾವಿಯ ಹನುಮಂತು, ಪವನ್, ಶ್ರೀಕಾಂತ್, ಗುಳದಹಳ್ಳಿಯ ಹನುಮಂತಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.