ಮಕ್ಕಳನ್ನು ಅಂಕ ಗಳಿಸುವ ಯಂತ್ರ ಮಾಡಬೇಡಿ

ಮಕ್ಕಳನ್ನು ಅಂಕ ಗಳಿಸುವ ಯಂತ್ರ ಮಾಡಬೇಡಿ

ದಾವಣಗೆರೆ, ಮೇ 19-  ಇಲ್ಲಿನ ಭಾಷಾ ನಗರದಲ್ಲಿ  ಕೆ.ಹೆಚ್. ಮಹಬೂಬ್ ಬ್ರಿಗೇಡ್ ಗ್ರೂಪ್ ವತಿಯಿಂದ   ಎಸ್.ಎಸ್.ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕ ಪಡೆದ 45 ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ನ್ಯಾಯವಾದಿ ರಜ್ವಿಖಾನ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಸಮಾರಂಭವನ್ನು ಉದ್ಘಾಟಿಸಿದ ವಿ.ಕ.ರ.ವೇ. ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಿ, ಮುಂದೆ ವೈದ್ಯರು, ಇಂಜಿನಿಯರ್ ಮಾಡಬೇಕು ಎಂಬ ಬಯಕೆ ಹೊಂದಿರುತ್ತಾರೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತಲೂ ಮಕ್ಕಳನ್ನೇ ಕುಟುಂಬದ, ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕು. ಮಕ್ಕಳಿಗೆ ಹೆಚ್ಚಿನ ಅಂಕ ಗಳಿಸುವಂತೆ ಒತ್ತಡ ಹೇರಬೇಡಿ. ಮಕ್ಕಳನ್ನು ಅಂಕ ತರುವ ಯಂ ತ್ರಗಳನ್ನಾಗಿ ಮಾಡಬೇಡಿ ಎಂದು ಹೇಳಿದರು. 

ಪತ್ರಕರ್ತ  ನಾಗರಾಜ್ ಬಡದಾಳ್   ಮಾತ ನಾಡಿ,   ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ದೊರೆ ಯುವಂತಾಗಲು ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಮಕ್ಕಳಿಗೆ ಎಸ್ಸೆಸ್ಸೆಲ್ಸಿ,  ಪಿಯುಸಿ ನಂತರ ಯಾವೆಲ್ಲ ಕೋರ್ಸ್‍ಗಳಿವೆ ಅವುಗಳ ಪ್ರವೇಶ ಪಡೆಯುವ ಬಗ್ಗೆ ಸಂಘಟಕರು ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್, ಪಾಲಿಕೆ ಸದಸ್ಯ ಕೆ. ಜಾಕೀರ್ ಅಲಿ, ಸಿವಿಲ್ ಇಂಜಿನಿಯರ್ ಸಮೀರ್ ಖಾನ್, ಗುರುಕುಲ ಶಾಲೆಯ ಅಧ್ಯಕ್ಷ ಆರ್. ಅಬ್ದುಲ್, ಯುನೈಟೆಡ್ ಇಂಟರ್‍ನ್ಯಾಷನಲ್ ಶಾಲೆಯ ಕೋ-ಆರ್ಡಿನೇಟರ್ ಷರ್ಫುನ್ನೀಸಾ ಅವರುಗಳು  ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಯುನೈಟೆಡ್ ಇಂಟರ್  ನ್ಯಾಷನಲ್ ಶಾಲೆಯ ಅಧ್ಯಕ್ಷ ದಾದಾಪೀರ್, ಸಮಾಜ ಸೇವಕ ಸೈಯದ್ ರಿಯಾಜ್ ಅಹ್ಮದ್,  ಪಾಲಿಕೆ ಸದಸ್ಯ  ಅಹ್ಮದ್ ಕಬೀರ್ ಖಾನ್, ಗುರುಕುಲ
ಶಾಲೆಯ ಉಪನ್ಯಾಸಕ  ಏಜಾಜ್  ಆಗಮಿಸಿದ್ದರು. ವಿ.ಕ.ರ.ವೇ. ಕಾರ್ಯದರ್ಶಿ ಅಮ್ಜದ್ ಅಲಿ ಸ್ವಾಗತಿಸಿದರು.  ನೂರ್‍ಅಹ್ಮದ್‍  ವಂದಿಸಿದರು.

ಕಾರ್ಯಕ್ರಮದಲ್ಲಿ ಆದಿಲ್‍ಬಾಷಾ, ಮೊಹ್ಮದ್ ಜುಬೇರ್, ಸೈಯದ್ ಮುಸ್ತಫಾ, ಟಿ. ಜಫು, ಇಮ್ರಾನ್ ಕೊಟ್ಟೂರು, ಇಮ್ರಾನ್, ಫಾರೂಖ್ ಹಟೇಲಿ, ಆಜಂ, ಶಾರೂಖ್, ಶಫಿ, ಹಜರತ್ ಅಲಿ, ದಾದಾಪೀರ್ ಆಟೋ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!