ದಾವಣಗೆರೆ, ಮೇ 17 – ನಗರದ ಚಿತ್ರಿಕಿ ಶಿವಕುಮಾರ್ ಅವರು ಮಹಾ ರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನದಲ್ಲಿ ಅಕ್ಕಮಹಾದೇವಿಯ ಯೋಗಾಂಗ ತ್ರಿವಿಧಿ ವಚನಗಳನ್ನು ಹಾಡಿದರು. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಕೋಟೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಅಕ್ಕಮಹಾದೇವಿಯವರ `ತನುಕರಗದವರಲ್ಲಿ’ ವಚನ ಹಾಡಿದರು. ಬೀದರ್‌ನ ಬಸವಗಿರಿಯಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಶಿವಶರಣೆ ಅಕ್ಕ ಅನ್ನಪೂರ್ಣ ತಾಯಿಯವರು ಚಿತ್ರಿಕಿ ಶಿವಕುಮಾರ್ ಮತ್ತು ಪುಷ್ಪ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು.
January 11, 2025