ರೈತರ ಸಾವಿಗೆ ಸ್ಪಂದಿಸಿ : ರವೀಂದ್ರಗೌಡ

ರೈತರ ಸಾವಿಗೆ ಸ್ಪಂದಿಸಿ : ರವೀಂದ್ರಗೌಡ

ರಾಣೇಬೆನ್ನೂರು, ಮೇ 17- ರೈತರ ಸಮಸ್ಯೆ ಮತ್ತು ಆತ್ಮಹತ್ಯೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ ಕರೂರು ಗ್ರಾಮಸ್ಥ ರೊಂದಿಗೆ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ್‌ ಶವದೊಂದಿಗೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕರೂರು ಗ್ರಾಮದ ಸೋಮಪ್ಪ ಕರಿಹನುಮಪ್ಪ ಹೊಸಮನಿ ತನ್ನ ರೇಷ್ಮೆ ಸಾಕಾಣಿಕಾ ಚಪ್ಪರದಲ್ಲಿ ನೇಣಿಗೆ ಶರಣಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವ ಜತೆಗೆ ಮೃತನ ಹೆಂಡತಿಗೆ 15 ಸಾವಿರ ಮಾಸಾಶನ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗುವವರೆಗೆ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ. ಆದ್ದರಿಂದ ಸರ್ಕಾರವು ಸಾಲ ಮನ್ನಾ ಮಾಡಿ, ರೈತರ ಜೀವ ಉಳಿಸಬೇಕೆಂದು ಮನವಿ ಮಾಡಿದ್ದಾರೆ.

ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಮೃತನ ಜಮೀನು ರಾಮ್ಕೋ ಸಿಮೆಂಟ್ ಫ್ಯಾಕ್ಟರಿಗೆ ಹೋಗಿದ್ದು, ಮೃತನ ಹಿರಿಯ ಮಗನಿಗೆ ಈ ಕಂಪನಿಯಲ್ಲಿ ನೌಕರಿ ಕೊಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಪಟ್ಟು ಹಿಡಿದಿದ್ದಕ್ಕೆ, ಫ್ಯಾಕ್ಟರಿಯ ಮುಖ್ಯಸ್ಥರು ಕೆಲಸ ಕೊಡುವ ಭರವಸೆ ನೀಡಿದರು.

ಮೃತನ ಶವ ಹೆದ್ದಾರಿಯಲ್ಲಿಟ್ಟು ಪ್ರತಿಭಟಿಸುವು ದಾಗಿ ಎಚ್ಚರಿಸಿದಾಗ ಬಂದ ತಹಶೀಲ್ದಾರ್‌ ಟಿ. ಸುರೇಶ್‌ ಕುಮಾರ್‌ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಹಲಗೇರಿ ಪಿಎಸ್ಐ ಸುನೀಲ್‌ ಕುಮಾರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

error: Content is protected !!