ಹಾರಕನಾಳು ಗ್ರಾಮದ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

ಹರಪನಹಳ್ಳಿ, ಮೇ 16 – ತಾಲ್ಲೂಕಿನ ಹಾರಕನಾಳು ಗ್ರಾಮದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು  ವಿತರಿಸ ಲಾಯಿತು. ಕಳೆದ ಮೇ 13 ರಿಂದ  ಆಶಾ ಕಾರ್ಯಕರ್ತೆಯರು ಹಾಗೂ ಪಿಹೆಚ್ಐಓ   ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲ್ವಿಚಾರಕಿ ಸಿ. ಭುವನೇಶ್ವರಿ  ನೇತೃತ್ವದಲ್ಲಿ   ಮನೆ ಮನೆಗೆ ತೆರಳಿ ಮಾತ್ರೆಗಳನ್ನು ವಿತರಿಸಲಾಯಿತು.

ಪ್ರತಿ ಆರು  ತಿಂಗಳಿಗೊಮ್ಮೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಗುವುದು.   ಮಕ್ಕಳಲ್ಲಿ ಆರಂಭದಲ್ಲಿಯೇ ರಕ್ತ ಹೀನತೆಯನ್ನು ಗುರುತಿಸು ವುದರಿಂದ ದೇಹದ ಬೆಳವಣಿಗೆಯಲ್ಲಿ ಆಗುವ ಕುಂಠಿತ ತೊಂದರೆಗಳನ್ನು ಹಾಗೂ ಇತರೆ ಸಾಮಾನ್ಯ ತೊಂದರೆಗಳನ್ನು ಗುರುತಿಸಿ ಮಗುವಿನ ಬಾಲ್ಯವನ್ನು ಸದೃಢ ಗೊಳಿಸಲು ಈ ಮಾತ್ರೆಗಳು ಉಪಯುಕ್ತವಾಗಿವೆ ಎಂದು  ಮಕ್ಕಳ ಪೋಷಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಸಿಬ್ಬಂದಿ  ಚಂದ್ರಪ್ಪ ಪೋಲಾರ್,  ಪವಿತ್ರ,   ಕವಿತಾ   ಹಾಗೂ  ಆಶಾ ಕಾರ್ಯಕರ್ತರು ಇದ್ದರು.

error: Content is protected !!