ಸಕ್ಕರೆ ಕಾರ್ಖಾನೆಯಿಂದಲೇ ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆ: ಎಸ್.ಎಸ್.ಗಣೇಶ್

ಸಕ್ಕರೆ ಕಾರ್ಖಾನೆಯಿಂದಲೇ ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆ: ಎಸ್.ಎಸ್.ಗಣೇಶ್

ದಾವಣಗೆರೆ, ಮೇ 16- ಕುಕ್ಕುವಾಡ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ನೀರಿಲ್ಲದೆ ಬಿರು ಬಿಸಿಲಿನ ಝಳಕ್ಕೆ ಒಣಗಿ ನಾಶವಾಗಿರುವ ಕಬ್ಬಿನ ಬೆಳೆಯನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ದಾವಣಗೆರೆ ಸಕ್ಕರೆ ಕಂಪನಿ ಛೇರ್ಮನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಎಸ್.ಎಸ್.ಗಣೇಶ್ ಹೇಳಿದರು.

ಅವರು ಇಂದು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಜಿ.ಸಿ.ನಿಂಗಪ್ಪ, ಮುದಹದಡಿ ದಿಳ್ಳೆಪ್ಪ, ಶಂಭುಲಿಂಗನಗೌಡ್ರು, ಕುಕ್ಕುವಾಡದ ಡಿ.ಬಿ.ಶಂಕರ್, ಕೆ.ಸಿ.ಶಿವಕುಮಾರ್‌ ಮುಂತಾದ ರೈತರ ನಿಯೋಗ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾತನಾಡಿದರು.

ರೈತರ ನಿಯೋಗವು ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆ ಸೇರಿದಂತೆ ಬಾಕಿಯಿರುವ ಕಬ್ಬು ಬಿಲ್ಲನ್ನು ರೈತರಿಗೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿತ್ತು. ಬಾಕಿಯಿರುವ ಕಬ್ಬಿನ ಬಿಲ್ ಇನ್ನೂ ಎರಡು, ಮೂರು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ರೈತರ ನಿಯೋಗದಲ್ಲಿ ಹೂವಿನಮಡು ಶಶಿಓಬಳೇಶ್, ರವಿಕುಮಾರ, ಕುಕ್ಕುವಾಡದ ಕೆ.ಜಿ.ರವಿಕುಮಾರ, ನಾಗರಸನಹಳ್ಳಿ ಚನ್ನಪ್ಪ, ಕೊಳೇನಹಳ್ಳಿ ಕೆ.ಶರಣಪ್ಪ, ಲಿಂಗಮೂರ್ತಯ್ಯ ಮುಂತಾದವರು ಉಪಸ್ಥಿತರಿದ್ದರು

error: Content is protected !!