ದಾವಣಗೆರೆ, ಮೇ 15 – ಭಾರತ ವಿಕಾಸ ಪರಿಷದ್ ಸ್ವಾಮಿ ವಿವೇಕಾನಂದ ಶಾಖೆ ವತಿಯಿಂದ 2024-25ನೇ ಸಾಲಿನ ಪದಗ್ರಹಣ ಹಾಗೂ ಕುಟುಂಬ ಮಿಲನ ಕಾರ್ಯಕ್ರಮವನ್ನು ಇಲ್ಲಿನ ರೋಟರಿ ಬಾಲಭವನದಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷ ಮೌನೇಶಪ್ಪ ಎನ್.ಪಿ. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೇವಾ ವಿಭಾಗದ ರಾಷ್ಟ್ರೀಯ ವೈಸ್ ಛೇರ್ಮನ್ ಬಿ.ಕೆ. ತಿಪ್ಪೇಸ್ವಾಮಿ, ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆಯ ರಾಷ್ಟ್ರೀಯ ಯೋಜನಾ ಸದಸ್ಯರಾದ ಮೋಹನ್ ಶ್ರೀಗಿರಿಪುರ ಮತ್ತು ಮಾಗನೂರು ಬಸಪ್ಪ ಪಿ ಯು ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಪ್ರಸಾದ್ ಬಂಗೇರ, ನಿಕಟಪೂರ್ವ ಅಧ್ಯಕ್ಷ ಎಲ್.ವಿ. ನಾಗಾನಂದ, ಕಾರ್ಯದರ್ಶಿ ಕೆ. ಶಿವಶಂಕರಪ್ಪ, ಕೋಶಾಧ್ಯಕ್ಷ ಎ. ನಾಗರಾಜ ರಾವ್ ಉಪಸ್ಥಿತರಿದ್ದರು.
January 9, 2025