ಮಲೇಬೆನ್ನೂರಿನ ವಿವಿಧೆಡೆಯಲ್ಲಿ ಬಸವ ಜಯಂತಿ ಆಚರಣೆ

ಮಲೇಬೆನ್ನೂರಿನ ವಿವಿಧೆಡೆಯಲ್ಲಿ ಬಸವ ಜಯಂತಿ ಆಚರಣೆ

ಮಲೇಬೆನ್ನೂರು, ಮೇ 15 – ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

ಪುರಸಭೆ ಮತ್ತು ನಾಡ ಕಛೇರಿಯಲ್ಲಿ ಹಮ್ಮಿಕೊಂ ಡಿದ್ದ ಬಸವ ಜಯಂತಿಯಲ್ಲಿ ಪುರಸಭೆ ಮುಖ್ಯಾಧಿ ಕಾರಿ ಎ.ಸುರೇಶ್ ಮತ್ತು ಉಪ ತಹಸೀಲ್ದಾರ್ ಆರ್.ರವಿ ಅವರು, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. 

ನಾಡ ಕಛೇರಿಯ ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿಕಾರಿ ಷರೀಫ್ ಹಾಗೂ ಸಿಬ್ಬಂದಿಗಳು ಮತ್ತು ಪುರಸಭೆಯ ಪ್ರಭು, ಉಮೇಶ್, ಶಿವರಾಜ್, ಮಂಜುನಾಥ್, ಮಾಜಿ ಸದಸ್ಯರಾದ ಬಿ.ಸುರೇಶ್, ಯೂಸುಫ್ ಖಾನ್, ಭೋವಿ ಕುಮಾರ್, ಚಮನ್ ಷಾ ಹಾಗೂ ಪುರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು. 

ಪಟ್ಟಣದ ಬಸವ ಮಂಟಪದಲ್ಲಿ ಬಸವ ಬಳಗ ಮತ್ತು ಅಕ್ಕನ ಬಳಗದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ಕುಂಬಾರ ಗುರು ಪೀಠದ ಶ್ರೀ ಕುಂಬಾರ  ಗುಂಡಯ್ಯ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಗ್ರಾ.ಪಂ ಮಾಜಿ ಅಧ್ಯಕ್ಷ ಭೋವಿ ಕುಮಾರ್, ಬೆಣ್ಣೆಹಳ್ಳಿ ಬಸವರಾಜ್, ಹಿಂಡಸಘಟ್ಟಿ ತಿಪ್ಪೇಸ್ವಾಮಿ, ಬಸವ ಬಳಗದ ಅಧ್ಯಕ್ಷ ವೈ.ನಾರೇಶಪ್ಪ ಹಾಗೂ ಸದಸ್ಯರು ಮತ್ತು ಅಕ್ಕನ ಬಳಗದ ಸರೋಜಮ್ಮ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

error: Content is protected !!