ಜಗಳೂರು, ಮೇ 15 – ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಕ್ಲಿಷ್ಟಕರ ಹೆರಿಗೆ ಮೂಲಕ ಸುಮಾರು 4.6 ಕೆಜಿಯ ಹೆಣ್ಣು ಮಗುವಿನ ಜನನವಾಗಿದ್ದು, ಹೆರಿಗೆ ನಂತರ ಮಗು ಉಸಿರಾಟದ ತೊಂದರೆಯಿಂದ ಸಾವು ಬದುಕಿನಿಂದ ಬಳಲುತ್ತಿರುವ ಮಗುವಿಗೆ ಎನ್.ಬಿ.ಎಸ್.ಯು ವೈದ್ಯರ ತಂಡ ತುರ್ತು ಚಿಕಿತ್ಸೆ ಕ್ರಮ ಕೈಗೊಳ್ಳವುದರ ಮೂಲಕ ಮಗುವಿನ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಬಿಳಿಚೂಡು ಗ್ರಾಮದ ಪೂಜಾ ನಾಗರಾಜ್ ಎಂಬ ಮಹಿಳೆ ನಾರ್ಮಲ್ ಹೆರಿಗೆ ಮೂಲಕ ಸುಮಾರು 4.6 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಹೆರಿಗೆ ಸಂದರ್ಭದಲ್ಲಿ ಮುಗು ಹುಟ್ಟಿದ ತಕ್ಷಣ ಅಳದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಮಯದಲ್ಲಿ ಸ್ತ್ರೀ ರೋಗ ತಜ್ಞ ಡಾ. ಸಂಜಯ್ , ಮಕ್ಕಳ ತಜ್ಞ ಡಾ. ಜಯಕುಮಾರ್ , ಇ.ಎನ್.ಟಿ. ಸ್ಪೆಷಲಿಸ್ಟ್ ಡಾ. ಕಿರಣ್ ವೈದ್ಯರು ಹಾಗೂ ದಾದಿಯರ ತಂಡ ಮಗು ತುರ್ತು ಚಿಕಿತ್ಸೆ ಮೂಲಕ ಮಗುವನ್ನು ರಕ್ಷಿಸುವ ಮೂಲಕ ಎಲ್ಲಾರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಇನ್ನೂ ತಾಯಿ ಮುಗು ಆರೋಗ್ಯಕರವಾಗಿದ್ದು ವೀಕ್ಷಿತಸ್ತಿತಿಗೆ ತಾಯಿ ಮಗುವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಆಡಳಿತ ವೈದ್ಯಧಿಕಾರಿ ಡಾ. ಷಣ್ಮುಖಪ್ಪ, ಶುಶ್ರೂಷೆಯಾರದ ದೀಪಾ , ಜೋತಿ , ಶೈಲಜಾ ಸೇರಿದಂತೆ ಇತರೆ ಸಿಬ್ಬಂದಿಗಳು ಮತ್ತಿತರರಿದ್ದರು.