ನಿಟ್ಟೂರಿನಲ್ಲಿ ಸಂಭ್ರಮದ ಉತ್ಸವ

ನಿಟ್ಟೂರಿನಲ್ಲಿ ಸಂಭ್ರಮದ ಉತ್ಸವ

ಮಲೇಬೆನ್ನೂರು, ಮೇ 14- ನಿಟ್ಟೂರು ಗ್ರಾಮದಲ್ಲಿ 16 ವರ್ಷಗಳ ನಂತರ ಜರುಗಿದ ಗ್ರಾಮದೇವತೆ ಶ್ರೀ ಮಾರಿಕಾಂಬದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ದೇವಿಯ ಮೆರವಣಿಗೆ ವೈಭವದೊಂದಿಗೆ ನಡೆಯಿತು.

ದೇವಿಯ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿದ ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿ, ಗ್ರಾಮದ ರಾಜ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಮಂಗಳವಾರ ರಾತ್ರಿ ಆರಂಭವಾದ ಮೆರವಣಿಗೆ ಬುಧವಾರ ಬೆಳಗಿನ ಜಾವದವರೆಗೂ ನಡೆಯಿತು. ನಂತರ ಘಟೆ ತಂದು ಹಿಟ್ಟಿನ ಕೋಣದ ಬಲಿ ಕೊಡಲಾಗುವುದು. ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಹರಕೆ, ಸೇವೆಗಳು ಭಕ್ತರಿಂದ ನೆರವೇರಲಿವೆ. ಹಬ್ಬಕ್ಕಾಗಿ ಬಂಧು-ಮಿತ್ರರು ಈಗಾಗಲೇ ಗ್ರಾಮಕ್ಕೆ ಆಗಮಿಸಿದ್ದು, ಬುಧವಾರ ಸಂಜೆ ಗ್ರಾಮದ ಮಾಂಸಹಾರಿಗಳ ಮನೆಗಳಲ್ಲಿ ಬಾಡೂಟ ಜೋರಾಗಿರುತ್ತದೆ.

error: Content is protected !!