ದಾವಣಗೆರೆ, ಮೇ 14 – ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಈಗಿನ ಸಂಸತ್ತಿನ ಅರಿವನ್ನು ಮೂಡಿಸಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.
ಇಲ್ಲಿನ ಕೆ.ಟಿ.ಜೆ. ನಗರದ 12ನೇ ಕ್ರಾಸ್ನಲ್ಲಿ ಕುರುವತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಜಗಜ್ಯೋತಿ ಬಸವಣ್ಣನವರು ಜಾತಿ, ಮತ, ಪಂಥಗಳ ಭೇದ-ಭಾವ ಅಳಿಸುವ ಜತೆಗೆ ಪುರುಷರಷ್ಟೇ ಮಹಿಳೆಯೂ ಸರಿಸಮಾನಳು ಎಂದು ಅಂದಿನ ಅನುಭವ ಮಂಟಪದಲ್ಲಿ ಸ್ತ್ರೀಗೆ ಸಮಾನ ಅವಕಾಶ ಕಲ್ಪಿಸಿದ್ದರು ಎಂದರು.
ಜವಳಿ ಸಂಗಪ್ಪ, ಕೇರಂ ಗಣೇಶ್, ಡಿ.ಎನ್. ಜಗದೀಶ್, ಕೆ.ಆರ್. ಪರಮೇಶ್ವರಪ್ಪ, ಗೋಣಪ್ಪ, ಚೇತನ್ಕುಮಾರ್, ಎಚ್. ನಾಗರಾಜ್, ಎಸ್. ಮಾನು, ಶಾಂತಕುಮಾರ್, ತಿಪ್ಪೇಶಿ, ಯೋಗಿ, ಗುರು, ಗೋಪಿ, ಬಿ.ಕೆ. ವೆಂಕಟೇಶ್ ಮತ್ತಿತರರಿದ್ದರು.