ಜಗಳೂರಿನಲ್ಲಿ ವಕೀಲ ಬಸವರಾಜ್
ಜಗಳೂರು, ಮೇ 12- ವಚನ ಸಾಹಿತ್ಯದ ಮೂಲಕ ವೈಚಾರಿಕತೆ, ಸಾಮಾಜಿಕ ಸಮಾನತೆ ಗಾಗಿ ಅವಿರತ ಶ್ರಮಿಸಿದ ವಿಶ್ವಗುರು ಬಸವಣ್ಣ ಅವರ ವಿಚಾರಗಳು ಯುವ ಸಮೂಹಕ್ಕೆ ಪಸರಿಸಲಿ ಎಂದು ತಾ.ಪಂ. ಮಾಜಿ ಸದಸ್ಯ ಹಾಗೂ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಮರೇನಹಳ್ಳಿ ವಕೀಲ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪ್ರೇರಣಾ ಚರ್ಚ್ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 891 ನೇ ವಿಶ್ವಗುರು ಬಸವಣ್ಣ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
`ಆರ್ಥಿಕ ಸಮಾನತೆ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಏಕತೆಯಂತಹ ಶ್ರೇಷ್ಠ ಮತ್ತು ಉದಾತ್ತ ಧ್ಯೇಯಗಳನ್ನು ಮೂಲಮಂತ್ರವನ್ನಾಗಿಸಿಕೊಂಡು, ಪ್ರಜಾಪ್ರಭುತ್ವ ತಳಹದಿಯ ಮೇಲೆ ನಿರ್ಮಿತಗೊಂಡ ಅನುಭವ ಮಂಟಪ ಪ್ರಥಮ ಸಂಸತ್ತು. ಅಂಬೇಡ್ಕರ್ ಮತ್ತು ವಿಶ್ವಗುರು ಬಸವಣ್ಣ ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು’ ಎಂದು ಹೇಳಿದರು.
ಪ್ರಾಂಶುಪಾಲ ನಾಗಲಿಂಗಪ್ಪ, ವಕೀಲ ಆರ್.ಓಬಳೋಬಳೇಶ್, ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಧನ್ಯಕುಮಾರ್ ಮಾತನಾಡಿದರು.
ಸಮಾರಂಭದಲ್ಲಿ, ವಕೀಲರಾದ ರಂಗಪ್ಪ, ಭೂಪತಿ, ತಿಪ್ಪೇಸ್ವಾಮಿ, ಮಹಾಂತೇಶ್, ತಿಪ್ಪೇಸ್ವಾಮಿ, ರುದ್ರೇಶ್ ಮಾಜಿ ಪ.ಪಂ ಅಧ್ಯಕ್ಷ ಮಂಜುನಾಥ್, ಮರೇನಹಳ್ಳಿ ನಜೀರ್ ಅಹಮ್ಮದ್, ಎಂ.ರಾಜಪ್ಪ, ಸತೀಶ್ ಮಲೆಮಾಚಿಕೆರೆ, ಮಾದಿಹಳ್ಳಿ ಮಂಜುನಾಥ್, ರಮೇಶ್, ಓಬಳೇಶ್, ರುದ್ರೇಶ್, ವಿಜಯ್ ಕೆಂಚೋಳ್, ಕುಮಾರ ನಾಯ್ಕ ಹಾಗೂ ಮುಂತಾದವರು ಇದ್ದರು.