ನಗರದಲ್ಲಿ ಶ್ರೀ ಶಂಕರ ಭಗವತ್ಪಾದರ ಜಯಂತ್ಯೋತ್ಸವದಲ್ಲಿ ಉಪನ್ಯಾಸ

ನಗರದಲ್ಲಿ ಶ್ರೀ ಶಂಕರ ಭಗವತ್ಪಾದರ ಜಯಂತ್ಯೋತ್ಸವದಲ್ಲಿ ಉಪನ್ಯಾಸ

ದಾವಣಗೆರೆ, ಮೇ 12- ಶ್ರೀ ಶಂಕರ ಭಗವತ್ಪಾದರ ಜಯಂತ್ಯೋತ್ಸವವು  ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ವರ್ತುಲ ರಸ್ತೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಇಂದು ಆರಂಭಗೊಂಡಿದ್ದು, ಶಿವಮೊಗ್ಗದ  ಶ್ರೀ ವಿದ್ವಾನ್ ಎಂ.ಎಸ್. ವಿನಾಯಕ್ ಉಪನ್ಯಾಸ ನೀಡಿದರು. 

ವಿನಾಯಕ್ ಅವರು ತಮ್ಮ ಉಪನ್ಯಾಸದಲ್ಲಿ, ಶ್ರೀ ಶಂಕರಾಚಾರ್ಯರ  ಕುರಿತು ಮತ್ತು ಭಾರತಕ್ಕೆ ಶ್ರೀ ಶಂಕರರ ಕೊಡುಗೆ ಎಂಬ ವಿಚಾರದ ಬಗ್ಗೆ  ವಿವರಿಸಿದರು.

ಶಂಕರಾಚಾರ್ಯರು ಹುಟ್ಟಿದ ನಂತರ ಅವರು ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ನಡೆದಾಡಿ ಹಾಗೂ ಭಾರತದ ವೈದಿಕ ಪರಂಪರೆ ಮತ್ತು ವೇದ ಉಪನಿಷತ್ತುಗಳ ಬಗ್ಗೆ, ಅಧ್ಯಾತ್ಮ ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಟ್ಟರು. ಅವರೇ ಭಾರತಕ್ಕೆ, ನಮ್ಮ ಸನಾತನ ಧರ್ಮಕ್ಕೆ ಶಿವನ ಪೂಜೆ  ಬಗ್ಗೆ ತಿಳಿಸಿಕೊಟ್ಟಿ ದ್ದಾರೆ, ಅಧ್ಯಾತ್ಮ ಸಾಧನೆ ಎಲ್ಲಾ ವರ್ಗದವರಿಗೂ ಸಂಬಂಧಪಟ್ಟದ್ದು, ಅದನ್ನು ಉಳಿಸಿಕೊಂಡು ಹೋಗುವಂತೆ ಶ್ರೀ ಶಂಕರರ ನುಡಿಯನ್ನುಈ ಸಂದರ್ಭದಲ್ಲಿ ತಿಳಿಸಿಕೊಟ್ಟರು. 

ಉಪನ್ಯಾಸದ ನಂತರ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಡೆಯಿತು. 

ಈ ಸಂದರ್ಭದಲ್ಲಿ ಶಂಕರ ಸೇವಾ ಸಂಘದ ಉಪಾ ಧ್ಯಕ್ಷ ಮೋತಿ ಸುಬ್ರಮಣ್ಯ, ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ವಿನಾಯಕ ಜೋಶಿ, ಅನಿಲ್ ಬಾರೆಂಗಳ್, ಚೈತನ್ಯ ನಾರಾಯಣಸ್ವಾಮಿ, ರಮೇಶ್ ಪಾಟೀಲ್,  ಬಾಲಕೃಷ್ಣ ವೈದ್ಯ, ಪಟ್ಟಾಭಿ ರಾಮನ್ ರಾಘವೇಂದ್ರ,  ಪುರೋಹಿತ  ಗಣೇಶ್ ಭಟ್, ಪುಟ್ಟಸ್ವಾಮಿ,  ಹರೀಶ್, ಎಸ್.ಕೆ. ಕುಲಕರ್ಣಿ ಹಾಗೂ ಇತರರು ಹಾಜರಿದ್ದರು.

error: Content is protected !!