ಶ್ರೀ ಸೋಮೇಶ್ವರ ಶಾಲೆಗೆ ಶೇ. 100 ಫಲಿತಾಂಶ

ಶ್ರೀ ಸೋಮೇಶ್ವರ ಶಾಲೆಗೆ ಶೇ. 100 ಫಲಿತಾಂಶ

ದಾವಣಗೆರೆ, ಮೇ 9- ನಗರದ ನಿಟುವಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ಸೋಮೇಶ್ವರ ಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 43 ವಿದ್ಯಾರ್ಥಿಗಳು ಉತ್ತಮ ಶ್ರೇಣಿ, ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  ಕು. ವೈ.ಎಂ. ಸೃಜನ 612 ಅಂಕದೊಂದಿಗೆ ಜಿಲ್ಲೆಗೆ 5ನೇ ಸ್ಥಾನ ಪಡೆದಿರುತ್ತಾಳೆ. ರಮ್ಯಶ್ರೀ ಎಸ್.ಎಸ್. (599 – 95.84%), ಸಹನ ಕೆ.ಎಂ. (598 – 95.68%), ಸಿಂಚನ ಆರ್. (590 – 94.40%), ಯುವಶ್ರೀ ಸಿ.ಎಸ್.(590 – 94.40%) ಉತ್ತಮ ಅಂಕ ಪಡೆದಿರುತ್ತಾರೆ.

ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ, ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಪೋಷ ಕರಿಗೂ ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್ ಅಭಿನಂದಿಸಿದ್ದಾರೆ.

error: Content is protected !!