ನಮಗೇಕಿಲ್ಲ ಕಲಿಕೆಯಲ್ಲಿ ಸಮಾನ ಅವಕಾಶ..? -ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆ ಮಾಡಿದ ಅಂಧ ವಿದ್ಯಾರ್ಥಿನಿ ಪ್ರಶ್ನೆ

ನಮಗೇಕಿಲ್ಲ ಕಲಿಕೆಯಲ್ಲಿ ಸಮಾನ ಅವಕಾಶ..? -ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆ ಮಾಡಿದ ಅಂಧ ವಿದ್ಯಾರ್ಥಿನಿ ಪ್ರಶ್ನೆ

ನಮಗೇಕಿಲ್ಲ ಕಲಿಕೆಯಲ್ಲಿ ಸಮಾನ ಅವಕಾಶ..? -ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆ ಮಾಡಿದ ಅಂಧ ವಿದ್ಯಾರ್ಥಿನಿ ಪ್ರಶ್ನೆ - Janathavaniದಾವಣಗೆರೆ, ಮೇ 9 – ಕಲಿಕೆಯಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಪ್ರದರ್ಶಿಸಿದರೂ, ಕಣ್ಣಿಲ್ಲ ಎಂಬ ಏಕೈಕ ಕಾರಣಕ್ಕೆ ಸಮಾನ ಅವಕಾಶ ನಿರಾಕರಿಸುವುದು ಸರಿಯೇ?

ಈ ಪ್ರಶ್ನೆ ಮುಂದಿಟ್ಟಿರುವುದು ಎಸ್.ಎಸ್.ಎಲ್.ಸಿ.ಯಲ್ಲಿ 593 ಅಂಕ ಗಳಿಸಿ ಸಾಧನೆ ಮಾಡಿರುವ ನಗರದ ಪಿ. ಯುಕ್ತಿ.

ಅಂಧ ವಿದ್ಯಾರ್ಥಿಗಳು 7ನೇ ತರಗತಿಯ ನಂತರ ಸಾಮಾನ್ಯರ ಜೊತೆ ಸಾಮಾನ್ಯ ಶಾಲೆ ಯಲ್ಲಿ ಕಲಿತರೆ ಸಾಮಾಜಿಕ ಬದುಕಿಗೆ ನೆರವಾ ಗುತ್ತದೆ.  ನಾವೂ ಮುಖ್ಯವಾಹಿನಿಗೆ ಬರಲು ಸಾಧ್ಯ ವಾಗುತ್ತದೆ. ಆದರೆ, ಅಂಧರೆಂಬ ಕಾರಣಕ್ಕಾಗಿ ಸಾಮಾನ್ಯ ಶಾಲೆಗಳು ನಮ್ಮನ್ನು ಸೇರಿಸಿಕೊಳ್ಳಲು ಹಿಂಜರಿಯುತ್ತವೆ ಎಂದು ಯುಕ್ತಿ ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಯಶಸ್ವಿನಿ ಅವರು ಸ್ಕ್ರೈಬ್ ಆಗಿ ನೆರವು ನೀಡಿದ್ದರು. ಶಿಕ್ಷಕರು ಹಾಗೂ ಸಹಪಾಠಿ ಗಳು ನನಗೆ ಸಹಕರಿಸಿದ್ದರು. ಮುಂದೆ ಐಎಎಸ್ ಪರೀಕ್ಷೆಯ ಗುರಿ ಇದೆ ಎಂದವರು ತಿಳಿಸಿದ್ದಾರೆ.

ನನ್ನ ಮಗಳು ಏಳನೇ ತರಗತಿಯವರೆಗೆ ಅಂಧರ ಶಾಲೆಯಲ್ಲಿದ್ದಳು. ನಂತರ ಸಾಮಾನ್ಯ ಶಾಲೆಗೆ ಸೇರಿಸಬೇಕು ಎಂದು ಏಳೆಂಟು ಶಾಲೆಗಳಿಗೆ ಅಲೆದಾಡಿದ್ದೆ. ಆದರೆ, ಯಾರೂ ಅವಕಾಶ ನೀಡಲಿಲ್ಲ. ಕೊನೆಗೆ ಸಿದ್ದಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ಶಾಲೆಗೆ ಪ್ರವೇಶ ನೀಡಿದರು. ಮೊದಲು ಮಗಳಿಗೆ ಕಣ್ಣಿಲ್ಲ ಎಂದು ನೋವಿನ ಕಣ್ಣೀರು ಬರುತ್ತಿದ್ದು, ಈಗ ಹೆಮ್ಮೆಯಿಂದ ಕಣ್ಣೀರು ಬರುತ್ತಿದೆ ಎಂದು ಯುಕ್ತಿ ತಾಯಿ ಕೆ.ಎಸ್. ಅನಿತಾ ಹೇಳಿದ್ದಾರೆ. ಯುಕ್ತಿ ತಂದೆ ಎಸ್. ಪ್ರಭಾಕರ್ ಅವರು ಗಾರ್ಮೆಂಟ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಅನಿತಾ ಗೃಹಿಣಿಯಾಗಿದ್ದಾರೆ.

ಯುಕ್ತಿ ಶಾಲೆಗೆ ಸೇರಲು ಬಂದಾಗ ಅವರ ಆತ್ಮವಿಶ್ವಾಸ ನೋಡಿ ಮೆಚ್ಚುಗೆಯಾಯಿತು. ಸಾಮಾನ್ಯ ವಿದ್ಯಾರ್ಥಿಯಂತೆ ಕಲಿಯಲು ಲ್ಯಾಪ್‌ ಟಾಪ್‌ ಒಂದನ್ನು ಆಡಳಿತ ಮಂಡಳಿಯಿಂದ ಕೊಡಿಸಿದ್ದೆವು. ಇದು ಯುಕ್ತಿ ಕಲಿಕೆಗೆ ನೆರವಾ ಯಿತು ಎಂದು ಜಸ್ಟಿನ್ ಡಿಸೌಜ ಹೇಳಿದ್ದಾರೆ.

ಸಿದ್ದಗಂಗಾ ಶಾಲೆಯ ದಿವ್ಯಾಂಗರಾದ ವಿದ್ಯಾರ್ಥಿ ಗೋವರ್ಧನ ನಾಯ್ಕ ಅವರು 372 ಅಂಕ ಗಳಿಸಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಇನ್ನೂ ಎರಡು ಅವಕಾಶಗಳಿರುವುದರಿಂದ, ಅದನ್ನು ಬಳಸಿಕೊಂಡು ಇನ್ನಷ್ಟು ಅಂಕ ಗಳಿಸುವ ಪ್ರಯತ್ನ ನಡೆಸುವುದಾಗಿ ಗೋವರ್ಧನ ನಾಯ್ಕ ತಿಳಿಸಿದ್ದಾರೆ.

error: Content is protected !!