ಹರಿಹರ, ಮೇ 7 – ನಗರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 77-99 ರಷ್ಟು ಶಾಂತಿಯುತ ಮತದಾನವಾಗಿದೆ.
ಬೆಳಿಗ್ಗೆ ಚುರುಕುಗೊಂಡ ಮತದಾನ ಮಧ್ಯಾಹ್ನದ ಹೊತ್ತಿಗೆ ಮತದಾನ ಪ್ರಕ್ರಿಯೆ ಕಡಿಮೆ ಆಗಿ ಮತ್ತೆ ಸಂಜೆ 4 ಗಂಟೆಯಿಂದ ಬಿರುಸಿನ ಮತದಾನ ನಡೆಯಿತು.
ಜಿ.ಬಿ.ಎಂ. ಎಸ್. ಶಾಲೆ, ಗಿರಿಯಮ್ಮ ಮಹಿಳಾ ಶಾಲೆ, ಲೋಕೋಪಯೋಗಿ ಕಚೇರಿ, ಹೈಸ್ಕೂಲ್ ಬಡಾವಣೆಯ ವಿವಿಧ ಶಾಲೆ, ಡಿ.ಆರ್.ಎಂ. ಶಾಲೆ, ಹಳ್ಳದಕೇರಿ ಶಾಲೆ, ಅಂಜುಮಾನ್ ಶಾಲೆ, ಹರ್ಲಾಪುರ ಬಡಾವಣೆ ಶಾಲೆ, ಎಂ.ಕೆ.ಇ.ಟಿ. ಶಾಲೆ, ಮರಿಯಾ ನಿವಾಸ್ ಶಾಲೆ, ಅಮರಾವತಿ ಶಾಲೆ, ಗುತ್ತೂರು ಶಾಲೆ, ಶಿಬಾರ್ ಸರ್ಕಲ್ ಶಾಲೆ, ಸೇರಿದಂತೆ ಒಟ್ಟು ನಗರದಲ್ಲಿ 78 ಮತಗಟ್ಟೆ ಕೇಂದ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.
ಎ.ಕೆ. ಕಾಲೋನಿಯಲ್ಲಿ ಮತ್ತು ಹೈಸ್ಕೂಲ್ ಬಡಾವಣೆ 5 ಮೇನ್ 6 ಕ್ರಾಸ್ ನಲ್ಲಿ ಕೆಲವು ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು, ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿ ಸಂಕೇತ ಹಾಗೂ ಹೆಚ್ ಉಮೇಶ್ ಎಂಬುವವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಎಲ್ಲಾ ಮತಗಟ್ಟೆ ಕೇಂದ್ರ ಮುಂಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕೇಸರಿ ವಸ್ತ್ರ ಮತ್ತು ಕಾಂಗ್ರೆಸ್ ಪಕ್ಷದವರು ಬಿಳಿ ವಸ್ತ್ರ ಧರಿಸಿದ್ದು ವಿಶೇಷವಾಗಿತ್ತು. ಬಿಸಿಲಿನ ತಾಪದಿಂದಾಗಿ ಮುಖಂಡರು, ಕಾರ್ಯಕರ್ತರು ನೆರಳಿಗಾಗಿ ಗಿಡ-ಮರಗಳ ಕೆಳಗೆ ಆಸರೆಯನ್ನು ಪಡೆದುಕೊಂಡರು.
ಚುನಾವಣೆ ಸಮಯ ಮುಗಿಯುತ್ತಿ ದಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕುಣಿದು ಸಂಭ್ರಮಿಸಿದರು.
ಚುನಾವಣೆ ಸರಾಗವಾಗಿ ನಡೆಯಲು ಚುನಾವಣೆ ಅಧಿಕಾರಿ ಭಾವನ ಬಸವ ರಾಜ್, ತಹಶೀಲ್ದಾರ್ ಗುರುಬಸವರಾಜ್, ಪೌರಾಯುಕ್ತ ಐಗೂರು ಬಸವರಾಜ್, ಬಿಇಓ ಹನುಮಂತಪ್ಪ, ಶಿಕ್ಷಣ ಇಲಾಖೆ ಬಸವರಾಜಯ್ಯ, ಚುನಾವಣೆ ಶಾಖೆಯ ಸೋಮಶೇಖರ್, ಉಮೇಶ್, ಸೇರಿದಂತೆ ಇತರೆ ಸಿಬ್ಬಂದಿಗಳು ಶ್ರಮ ವಹಿಸಿದರು.
ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯ ದಂತೆ ಪೊಲೀಸ್ ಇಲಾಖೆಯ ಪಿಎಸ್ಐ ದೇವಾನಂದ್, ಮಂಜುನಾಥ್ ಕುಪೇ ಲೂರ್ ಸೇರಿದಂತೆ ಇತರೆ ಪೊಲೀಸ್ ಅಧಿ ಕಾರಿಗಳು ಮತ್ತು ಸಿಬ್ಬಂದಿಗಳು ಮುಂ ಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ಮುಖಂಡ ರಾದ ಚಂದ್ರಶೇಖರ್ ಪೂಜಾರ್, ಹನಗವಾಡಿ ಎಸ್.ಎಂ. ವೀರೇಶ್, ನಂದಿಗಾವಿ ಶ್ರೀನಿವಾಸ್, ಹೆಚ್.ಎಸ್. ನಾಗರಾಜ್, ಗುತ್ತೂರು ಜಿ. ಬಿ. ಹಾಲೇಶಗೌಡ್ರು, ಟಿ.ಜೆ. ಮುರುಗೇಶಪ್ಪ, ಬಿ. ರೇವಣಸಿದ್ದಪ್ಪ, ಎಂ. ನಾಗೇಂದ್ರಪ್ಪ, ಕೆ. ಜಡಿಯಪ್ಪ, ಕೃಷ್ಣ ಸಾ ಭೂತೆ, ಶಂಕರ್ ಖಟಾವ್ಕರ್ ಮತ್ತಿತರರು ಹಾಜರಿದ್ದರು.