ಹೊನ್ನಾಳಿ, ಮೇ 7- ತಾಲ್ಲೂಕಿನ ಕಮ್ಮಾರಗಟ್ಟೆ ಮತ ಕೇಂದ್ರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಮತಯಂತ್ರ ದೋಷದಿಂದ ಸಮಯವಿದೆ ಎಂದು ತಡವಾಗಿ ಬಂದ 10 ಮತದಾರರು ಮತದಾನದಿಂದ ವಂಚಿತರಾಗಿರುವುದಾಗಿ ತಿಳಿದು ಬಂದಿದೆ. ದೋಷಗೊಂಡ ಮತಯಂತ್ರವನ್ನು ಬದಲಿಸಲಾಗಿತ್ತು.
ತಾಲ್ಲೂಕಿನ ಕಮ್ಮಾರಗಟ್ಟೆ ಮತ ಕೇಂದ್ರ 91 ರಲ್ಲಿ 1084 ಮತದಾರರಿದ್ದು, 969 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಮತಯಂತ್ರ ದೋಷದ ಕೇಂದ್ರದಲ್ಲಿ 6 ಗಂಟೆಯೊಳಗೆ ಬಂದಿದ್ದ 25 ಜನರಿಗೆ ಮತದಾನ ತಡವಾದ ಕಾರಣ ಟೋಕನ್ ನೀಡಿ ಅವಕಾಶ ಕಲ್ಪಿಸಲಾಗಿದೆ.
6 ಗಂಟೆ 5 ನಿಮಿಷಕ್ಕೆ ಒಂದು, ಟೋಕನ್ ಪಡೆದವರ ಜೊತೆ ಒಳಗೆ ಕೂತಿದ್ದ 10 ಮತದಾರರಿಗೆ ಟೋಕನ್ ನೀಡಿರುವುದಿಲ್ಲ. ಇವರು ನಮಗೆ ಅವಕಾಶ ಕಲ್ಪಿಸಬಹುದೆಂದು ಟೋಕನ್ ಪಡೆದವರ ಜೊತೆ ಕೂತಿದ್ದು, ಅವಧಿ ಮೀರಿ ಬಂದಿದ್ದ ಕಾರಣ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ಸ್ಥಳೀಯ ಮುಖಂಡರು ಪತ್ರಿಕೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.