ರಾಣೇಬೆನ್ನೂರು, ಮೇ 7 – ಜಿಲ್ಲಾ ಸ್ವೀಪ್ ಸಮಿತಿಯು ಗುಳೇ ಬಂದ ಹೆಳವರು ಮತ್ತು ಅಲೆಮಾರಿ ಗಳಿಗೆ ಮತದಾನದ ಅರಿವು ಮೂಡಿಸದೇ ಇರುವುದ ರಿಂದ ಈ ಜನಾಂಗ ಮತದಾನದಿಂದ ವಂಚಿತರಾಗಿದ್ದಾರೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ್ ಆರೋಪಿಸಿದರು. ತಾಲ್ಲೂಕಿನ ಮುಷ್ಟೂರು ಗ್ರಾಮದ ಹೊರ ವಲಯದಲ್ಲಿರುವ ಅಲೆಮಾರಿಗಳ ಬಗ್ಗೆ ಚರ್ಚಿಸಿ ಮತದಾನ ಜಾಗೃತಿ ಮೂಡಿಸಿ ಮಾತನಾಡಿದರು. 2 ತಿಂಗಳಿಂದ ಮತದಾನ ಜಾಗೃತಿ ಮಾಡಿದ್ದ ಸ್ವಿಪ್ ಸಮಿತಿಯು ಅವಶ್ಯಕತೆ ಇರುವವರಿಗೆ ಮತದಾನ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದ್ದು, ಇದಕ್ಕೆ ಜಿಲ್ಲಾ ಸ್ವೀಪ್ ಸಮಿತಿಯ ನಿರ್ಲಕ್ಷವೇ ಕಾರಣ ಎಂದಿದ್ದಾರೆ.
ರಾಣೇಬೆನ್ನೂರು : ಅಲೆಮಾರಿಗಳಲ್ಲಿ ಮತ ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಮಿತಿ ವಿಫಲ
