ಹರಿಹರ, ಮೇ 6- ನಗರದ ದೊಡ್ಡಿ ಬೀದಿ ಬಡಾವಣೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಸಕಾಲಕ್ಕೆ ಕಾಮ ಗಾರಿ ಪೂರ್ಣಗೊಳಿ ಸದೇ ಇರುವುದರಿಂದ ಬಡಾವಣೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಡಾವಣೆಯಲ್ಲಿ ಓಡಾಡುವ ಜನರು, ರಸ್ತೆಯ ವಿಕಾರತೆ ಗಮನಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಿಳಂಬ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದು ನಿವಾಸಿ ಎಂ.ಎಚ್.ಬಿ. ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಕುರಿತು ಗುತ್ತಿಗೆದಾರ ಸದ್ದಾಂ ಮತ್ತು ನಗರಸಭೆ ಎಇಇ ತಿಪ್ಪೇಸ್ವಾಮಿ ಅವರಿಗೆ ತಿಳಿಸಿದರೆ ಉದ್ಧಟತನದ ಮಾತುಗಳಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ. ಕಾಮಗಾರಿ ಪರಿಶೀಲಿಸಿ ಪೂರ್ಣಗೊಳಿಸುವ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.