ದಾವಣಗೆರೆ, ಮೇ 6- ನಗರದ ವಚನಾಮೃತ ಬಳಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ನಾರಾಯಣ ಹೃದಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಆರೋಗ್ಯ ತಪಾಸಣೆ ಹಾಗೂ ದತ್ತಿ ಅನುಭಾವವನ್ನು ಎಸ್. ಎಸ್. ಲೇಔಟ್ನ ಸುಪ್ರೀತ್ ಹಾಲ್ನಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ವಚನಾಮೃತ ಬಳಗದ ಅಧ್ಯಕ್ಷರಾದ ಸೌಮ್ಯ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಶಾಂತರಾಜ್ ದಾನಿಗಳ ಪರವಾಗಿ ಆಗಮಿಸಿ ವಚನಗಳನ್ನು ಕಲಿತು ಹಾಡಿ ಅನುಸರಿಸಿದರೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದು ಹೇಳಿದರು.
ನಾರಾಯಣ ಹೃದಯಾಲಯದ ಡಾ. ಗುರುರಾಜ್ ಆರೋಗ್ಯ ತಪಾಸಣೆ ಹಾಗೂ ಕ್ಯಾಂಪಿನ ಮುಂದಾಳತ್ವ ವಹಿಸಿ, ಆರೋಗ್ಯವೇ ಭಾಗ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಪರಮೇಶರಪ್ಪ ದತ್ತಿ ಹಾಗೂ ಶರಣ ಸಂಸ್ಕೃತಿ ಹಾಗೂ ವಚನ ಸಾಹಿತ್ಯ ಪ್ರಚಾರದ ಬಗ್ಗೆ ಮಾತನಾಡಿದರು.
ಸುಜಾತ ಬಸವರಾಜ್ ಹಾಗೂ ವಚನಾಮೃತ ಬಳಗದ ಗೆಳತಿಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸೌಮ್ಯ ಸತೀಶ್ ಸ್ವಾಗತಿಸಿದರು. ದೀಪ ಕಿರಣ್ ವಂದಿಸಿದರು. ಶ್ರೀಮತಿ ಮಮತಾ ನಾಗರಾಜ್ ನಿರೂಪಿಸಿದರು.