ಹರಪನಹಳ್ಳಿ,ಮೇ 6- ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹರಪನಹಳ್ಳಿ ತಾಲೂಕಿನ 253 ಮತಗಟ್ಟೆಗಳಿಗೆ , ಅಧಿಕಾರಿಗಳು ಹೆಚ್ ಪಿ ಎಸ್ ಕಾಲೇಜಿನಿಂದ ವಿವಿ ಪ್ಯಾಟ್ ಹಾಗೂ ಇವಿಎಮ್ ಮತ ಯಂತ್ರಗಳೊಂದಿಗೆ ಬಸ್ ಮೂಲಕ ತೆರಳಿದರು. ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ನಿಯೋಜಿತ ಕೇಂದ್ರಗಳಿಗೆ ತೆರಳುವಾಗ ಬಿಸಿಲ ತಾಪಕ್ಕೆ ಕಂಪಾರ್ಟ್ಮೆಂಟ್ ಬೋರ್ಡ್ಗಳನ್ನೇ ತಲೆಗೆ ಆಸರೆಯಾಗಿಸಿಕೊಂಡು ತೆರಳಿದ್ದು ಕಂಡುಬಂದಿತು.
ಈ ವೇಳೆ ಎಆರ್ಒ ಚಿದಾನಂದ ಗುರು ಸಿದ್ದಪ್ಪ, ತಹಶೀಲ್ದಾರ್ ಗಿರೀಶ್ ಬಾಬು, ಇಒ ಚಂದ್ರಶೇಖರ್, ಪುರಸಭಾ ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ಇತರರು ಇದ್ದರು