ದಾವಣಗೆರೆ, ಮೇ 5 – ರಾಯಚೂರು ಜಿಲ್ಲೆ, ಲಿಂಗಸೂರು ತಾಲ್ಲೂಕಿನ, ತಲೆಕಟ್ಟು ಗ್ರಾಮದ ಅಂಕಲಿ ಮಠದ ಅಂಕಲಿ ಶ್ರೀಗಳು ನಿನ್ನೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ರವರ ನಿವಾಸದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಂತೆ ಶಾಲು ಹೊದಿಸಿ, ಹೂವಿನ ಹಾರ ಅರ್ಪಿಸಿ, ಮಠದ ಪ್ರಸಾದ ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಮಾಜಿ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ,
ಕಾಂಕ್ರೀಟ್ ಮಿಕ್ಸರ್ ಮಾಲೀಕ ನಾಗರಾಜ್, ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಬಸಾಪುರದ ಹರೀಶ್ ಇನ್ನು ಮುಂತಾದ ಮಠದ ಭಕ್ತರು ಉಪಸ್ಥಿತರಿದ್ದರು.