ದಾವಣಗೆರೆ, ಮೇ 5- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ನೇತೃತ್ವದಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಮಂಡನೆ ಮಾಡುವ ಅರ್ಹತೆ ಇರುವ ಹಾಗೂ ಭಾಷಾ ನೈಪುಣ್ಯತೆ ಹೊಂದಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲ್ಲಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಕರೆ ನೀಡಿದರು.
ಕಾಂಗ್ರೆಸ್ ಗೆಲ್ಲಿಸಲು ಸೈಯದ್ ಖಾಲಿದ್ ಅಹ್ಮದ್ ಕರೆ
![16 khalid 06.05.2024 ಕಾಂಗ್ರೆಸ್ ಗೆಲ್ಲಿಸಲು ಸೈಯದ್ ಖಾಲಿದ್ ಅಹ್ಮದ್ ಕರೆ](https://janathavani.com/wp-content/uploads/2024/05/16-khalid-06.05.2024-860x336.jpg)