ಹರಿಹರ, ಮೇ 1- ಕಳೆದ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ಮಾಡಿರುವ ಬಿಜೆಪಿ ಸರ್ಕಾರದ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಪಕ್ಕೀರಸ್ವಾಮಿ ಮಠ ಮುಂಭಾಗ ದಿಂದ ನಡೆದ ಬಿಜೆಪಿ ಪ್ರಚಾರದ ರೋಡ್ ಶೋ ಮೂಲಕ ಮತಯಾಚನೆ ಮಾಡಿ ನಂತರ ಹರಿಹರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮತದಾರರ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಜನರು ನೆಮ್ಮದಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಜೊತೆಗೆ ನಮ್ಮ ಮಾವನವರಾದ ಜಿ.ಎಂ. ಮಲ್ಲಿಕಾರ್ಜುನಪ್ಪ ಹಾಗೂ ನಮ್ಮ ಪತಿ ಜಿ.ಎಂ. ಸಿದ್ದೇಶ್ವರ ಅವರೂ ಸಹ ಜಿಲ್ಲೆಯ ಜನರು ನೆಮ್ಮದಿ ಜೀವನ ನಡೆಸಲು ಸಾಕಷ್ಟು ಶ್ರಮಿಸಿದ್ದು, ಅವರು ಮಾಡಿರುವ ಜನಪರವಾದ ಕೊಡುಗೆಗಳನ್ನು ಇಂದಿಗೂ ಜಿಲ್ಲೆಯ ಜನರು ಸ್ಮರಿಸುತ್ತಾರೆ. ಅವರು ಜಿಲ್ಲೆಯ ಜನತೆಗಾಗಿ ಶ್ರಮವಹಿಸಿದ ಪರಿಣಾಮ ನನಗೆ ಈ ಬಾರಿ ಅಧಿಕ ಮತಗಳಿಂದ ಜಿಲ್ಲೆಯ ಜನರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಹೊಂದಿರುವುದಾಗಿ ಹೇಳಿದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹವಾ ಇದ್ದು ಮತ್ತು ಪ್ರತಿಯೊಂದು ಗ್ರಾಮದಲ್ಲಿ ರೋಡ್ ಶೋ, ಬಹಿರಂಗ ಭಾಷಣ ಇವೆಲ್ಲವೂ ಒಂದು ಹಂತಕ್ಕೆ ಮುಗಿದಿದ್ದು, ಚುನಾವಣೆ ಇನ್ನೂ ಕೇವಲ ಐದು ದಿನ ಮಾತ್ರ ಬಾಕಿ ಇದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಕರಪತ್ರಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿ ಬೆಂಬಲಿಸಲು ಜನ ಸಾಗರವೇ ಹರಿದುಬರುತ್ತಿದ್ದು, ಈ ಬಾರಿ ಬಿಜೆಪಿ ಪಕ್ಷವು ಇತಿಹಾಸ ಸೃಷ್ಟಿ ಮಾಡುವಂತೆ, ಸುಮಾರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗಾಯಿತ್ರಿ ಸಿದ್ದೇಶ್ ಗೆಲ್ಲಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ನಗರಸಭೆ ಸದಸ್ಯರಾದ ಗುತ್ತೂರು ಜಂಬಣ್ಣ, ಹನುಮಂತಪ್ಪ, ಪಿ.ಎನ್. ವಿರುಪಾಕ್ಷಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್ ಹಿಂಡಸಗಟ್ಟ, ಮುಖಂಡರಾದ ಹಲಸಬಾಳು ಶಿವಾನಂದಪ್ಪ, ಗೌಡ್ರು ಪುಟ್ಟಪ್ಪ, ಡಿ.ಯು. ಅರುಣ್ ಕುಮಾರ್ ಮಿಠಾಯಿ, ಅಡಕಿ ಕುಮಾರ್, ಸುರೇಶ್ ಚಂದಪೂರ್, ಕಲ್ಲಯ್ಯ, ಸಿದ್ದೇಶ್ ಹೊಳಗಡ್ಡೆ, ಹೆಚ್. ಮಂಜನಾಯ್ಕ್, ತುಳಜಪ್ಪ ಭೂತೆ, ರಾಜು ರೋಖಡೆ, ಬಸವನಗೌಡ, ಸ್ವಾತಿ ಹನುಮಂತಪ್ಪ, ಸಂತೋಷ ಪೋಟೋ, ರೂಪಾ ಕಾಟ್ವೆ, ಪ್ರಮೀಳಾ ನಲ್ಲೂರು, ರೂಪಾ ಶಶಿಕಾಂತ್, ಲತಾ ಕೊಟ್ರೇಶ್, ಆಟೋ ರಾಜು, ಬಾತಿ ಚಂದ್ರಶೇಖರ್, ರಾಜು ಕಿರೋಜಿ, ಅದಿತ್ಯ, ಅದ್ವೈತ ಶಾಸ್ತ್ರಿ, ರಶ್ಮಿ ಮೆಹ ರ್ವಾಡೆ, ಸಾಕ್ಷಿ, ಮಮತಾ ಇತರರು ಹಾಜರಿದ್ದರು.