ಜಗಳೂರು, ಏ. 29 – ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿದ್ಯಾರ್ಥಿಗಳು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುವುದು ಬಡತನವೇ. ಓದಿಗೆ ತಕ್ಕಂತೆ ಕೆಲಸಕ್ಕೆ ಸೇರುತ್ತಾರೆ. ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗಬೇಕು. ಈ ಬದಲಾವಣೆ ತರಬೇಕು ಎಂಬುದು ನನ್ನ ಆಸೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಜಗಳೂರು ತಾಲ್ಲೂಕಿನ ಲಕ್ಕಂಪುರ ಗ್ರಾಮದಲ್ಲಿ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆದು ಭವಿಷ್ಯದಲ್ಲಿ ರಾಷ್ಟ್ರೀಯ ನಾಯಕ ರಾಗಬೇಕು. ದೊಡ್ಡ ಕನಸು ನನಸಾಗಿಸುವ ವ್ಯವಸ್ಥೆ ಹುಟ್ಟು ಹಾಕಬೇಕು. ಈ ಹೋರಾಟ ಈಗ ಶುರುವಾಗಿದೆ. ನನ್ನನ್ನು ಗೆಲ್ಲಿಸಿದ್ದೇ ಆದರೆ ದಾವಣ ಗೆರೆ ಮಾತ್ರವಲ್ಲ, ಭಾರತದ ದೇಶದಲ್ಲಿ ಐತಿಹಾಸಿಕ ಘಟನೆ ಆಗುತ್ತದೆ ಹೇಳಿದರು. ದೈತ್ಯವಾಗಿ ಬೆಳೆದ ವರು ಸ್ವಲ್ಪ ಪ್ರಮಾಣದಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ. ಪಕ್ಷೇತರ ನಿಂತು ಗೆದ್ದಾಗ ಅಭಿವೃದ್ಧಿ ಜನರನ್ನು ಹುಡುಕಿಕೊಂಡು ಬರುತ್ತದೆ. ದಾವಣಗೆರೆ ರಾಜಕಾರಣ ಮುಕ್ತವಾಗಿರಲಿ, ಹೊಸಬರಿಗೆ ಅವಕಾಶ ಸಿಗಲಿ, ಧೈರ್ಯ ಬರಲಿ ಎಂಬ ಕಾರಣಕ್ಕೆ ಹೋರಾಟ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ದೈತ್ಯವಾಗಿ ಬೆಳೆದವರಿಗೂ ವಿನಯತೆ ಬರಲಿ. ಸಾಮಾಜಿಕ ಕಳಕಳಿ ಮನಸ್ಸಲ್ಲಿ ಮತ್ತೊಮ್ಮೆ ಮೂಡಲಿ. ಬರಗಾಲ ಇಲ್ಲದಿದ್ದರೂ ಬಡತನ ಇನ್ನೂ ಇದೆ. ಇದಕ್ಕೆ ಹೊಂದಿಕೊಂಡು ಬದುಕುತ್ತಿದ್ದೇವೆ. ಮಕ್ಕಳು ಶಾಲೆ ಬಿಟ್ಟರೂ ತಲೆಕೆಡಿಸಿಕೊಳ್ಳುವುದಿಲ್ಲ.ಅಷ್ಟರ ಮಟ್ಟಿಗೆ ನಾವು ಬದುಕುತ್ತಿದ್ದೇವೆ. ಇದೂ ಸಹ ಬಡತನ ಎಂದು ಹೇಳಿದರು.
ನಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಮೇಲೆ ಶಾಲೆ, ಆಸ್ಪತ್ರೆ ಸೇರಿದಂತೆ ಜನರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಪರಿಹರಿಸಲು ಮುಂದಾಗುತ್ತಿರುವುದು ಕಂಡು ಬರುತ್ತಿದೆ. ಜನರೊಟ್ಟಿಗೆ ಸೌಜನ್ಯವಾಗಿ ಮಾತನಾ ಡುತ್ತಾರೆ. ಗೇಟ್ ಒಳಗೂ ಬಿಟ್ಟುಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದ ಗೆಲುವು. ಘಟಾನುಘಟಿ ಗಳನ್ನು ಎದುರಿಸಿ ಸ್ಪರ್ಧಿಸುವುದು ಸಾಮಾನ್ಯ ಮಾತಲ್ಲ. ಹೆದರಿದ್ದಕ್ಕೆ ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಿ ದ್ದಾರೆ. ಹಿಂದಿನ ಚುನಾವಣೆಯಲ್ಲಿ ತಾಲ್ಲೂಕು, ಹಳ್ಳಿಗಳಿಗೆ ಬಂದು ರೋಡ್ ಶೋ ಮಾಡುತ್ತಿರಲಿಲ್ಲ. ಈಗ ಬರುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಚಿಕ್ಕ ಗೆಲುವು ಎಂಬುದು ಜನರ ಭಾವನೆ ಎಂದರು.