ದಾವಣಗೆರೆ, ಏ. 29- ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿ ಹಾಗೂ ಅವರ ಅರಿವಿನ ಸಾಮರ್ಥ್ಯಕ್ಕೆ ಶಾಸಕ ಬಿ.ಪಿ. ಹರೀಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿಯವರು ನನ್ನ ಕೈ ಕುಲುಕಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನನ್ನನ್ನು ಪ್ರಧಾನಿಗೆ ಪರಿಚಯಿಸುತ್ತಿದ್ದಂತೆಯೇ ಇವರ ಬಗ್ಗೆ ಹಾಗೂ ಇ
ವರ ಹೋರಾಟದ ಬಗ್ಗೆಯೂ ನನಗೆ ತಿಳಿದಿದೆ ಎಂದಾಗ ನನಗೆ ಅಚ್ಚರಿ ಹಾಗೂ ಅತೀವ ಸಂತೋಷವೂ ಆಯಿತು ಎಂದು ಹರೀಶ್ ಹೇಳಿದ್ದಾರೆ.
ಇಡೀ ದೇಶದ ಹೊಣೆ ಹೊತ್ತಿರುವ ಪ್ರಧಾನಿಯವರು ದಾವಣಗೆರೆ ಜಿಲ್ಲೆಯಲ್ಲಿ ಗೆದ್ದ ಓರ್ವ ಶಾಸಕನ ಬಗ್ಗೆ ತಿಳಿದುಕೊಂಡಿದ್ದಾರೆ
ಎಂದರೆ ಅವರ ಕಾರ್ಯವೈಖರಿ ಮೆಚ್ಚುವಂತಹದ್ದು ಎಂದು ಹರೀಶ್ ಹೇಳಿದರು.