ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸಲು ಕರೆ

ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸಲು ಕರೆ

ಹರಪನಹಳ್ಳಿ ತಾಲ್ಲೂಕು ಚಿಗಟೇರಿಯಲ್ಲಿನ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ, ಡಾ. ಅರವಿಂದ್

ಹರಪನಹಳ್ಳಿ, ಏ. 29 – ವಿಶ್ವ ಮಲೇರಿಯಾ ದಿನಾಚರಣೆ 25 ಏಪ್ರಿಲ್ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿ ಸೋಣ. ಮಲೇರಿಯಾ ರೋಗದಿಂದ ಮುಕ್ತರಾಗಲು ಸೊಳ್ಳೆಗಳ ನಿರ್ಮೂಲನೆಯಿಂದಲೇ ಸಾಧ್ಯ. ಯಾವುದೇ ಜ್ವರವಿರಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಿ. ಮಲೇರಿಯಾ ಖಚಿತ ಎಂದು ದೃಢಪಟ್ಟಲ್ಲಿ ತ್ವರಿತ ಚಿಕಿತ್ಸೆ ನೀಡಲಾ ಗುವುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ, ಡಾ. ಅರವಿಂದ್ ತಿಳಿಸಿದರು.

 ತಾಲ್ಲೂಕಿನ ಚಿಗಟೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಿಶ್ವ ಮಲೇರಿಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಪ್ರತಿ ವರ್ಷ ಏಪ್ರಿಲ್ 25 ರಂದು ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.  ಮಲೇರಿಯಾ ಚಿಕಿತ್ಸೆಯಾದ ಕ್ಲೋರೋಕ್ವೀನ್ ಮತ್ತು ಪ್ರೈಮಾಕ್ವಿನ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಮತ್ತು  ರೋಗ ಪೀಡಿತ ಪ್ರದೇಶಗಳಲ್ಲಿ ಸೊಳ್ಳೆಗಳ ನಿರ್ಮೂಲನೆಗಾಗಿ ಬಳಸುವ ಡಿ.ಡಿ.ಟಿ. ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

ಸಿ.ಜಿ. ಭುವನೇಶ್ವರಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಚಿಗಟೇರಿ ಇವರು ಮಲೇರಿಯಾ ಮನುಕುಲದ ಇತಿಹಾಸದಲ್ಲೇ ಒಂದು ಹಳೆಯ ಪಿಡುಗು. ಆಡು ಮುಟ್ಟದ ಸೊಪ್ಪಿಲ್ಲ ಮಲೇರಿಯಾ ಗೊತ್ತಿಲ್ಲದ ಜನರಿಲ್ಲ. ಎಂಬ ಗಾದೆ ಮಾತಿ ನಂತೆ ಮಲೇರಿಯ ರೋಗ ಯಾವ ದೇವರ ಶಾಪವೂ ಅಲ್ಲ, ಪಾಪದ ಪ್ರತಿಫಲವೂ ಅಲ್ಲ. ಇದು ಮಾನವನ ಬೇಜವಾಬ್ದಾರಿಯ ಕಳಕಳಿ ಇರಬೇಕು ಎಂದರು.  

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಚಂದ್ರೇಗೌಡ ತ್ಯಾಗರಾಜ್, ಕೆಂಚಮ್ಮ  ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!