ದಾವಣಗೆರೆ, ಏ. 29- ವಚನಾಮೃತ ಬಳಗದಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಆಚರಿಸಲಾಯಿತು.
ನಾರಾಯಣ ಹೃದಯಾಲಯದ ಡಾ. ಗುರುರಾಜ್ ಮಾತನಾಡಿ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಬಳಗದ ಸದಸ್ಯರಿಗೆ ಹೆಚ್ಚಿನ ಅರಿವು ಮೂಡಿಸಿ, ಕೊಲೆಸ್ಟ್ರಾಲ್ ಕಂಟ್ರೋಲ್ ಬಗ್ಗೆ ಹಾಗೂ ಆಹಾರ ಪದ್ಧತಿಯ ಬಗ್ಗೆ ತಿಳಿಸಿದರು. ವಿನೋದ ಅಜಗಣ್ಣನವರ, ಮಮತಾ ನಾಗರಾಜ್ ಮಾತನಾಡಿದರು.
ಕಾರ್ಯಕ್ರಮದ ಆಯೋಜಕರಾದ ಸೌಮ್ಯ ಸತೀಶ್ ಧಾರ ವಾಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ನಮ್ಮ ವಚನ ಗುರುಗಳಾದ ರೇವಣಸಿದ್ದಪ್ಪ, ಪ್ರಮೀಳಾ ನಟರಾಜ್, ಗಾಯತ್ರಿ ಸುಭಾಷ್, ಮಧುಮತಿ ದೇವಿಗೆರೆ, ಶಾಂತ ಶಿವ ಶಂಕರ್, ಲತಾ ಕಪ್ಪಾಳಿ, ಸುಮಾ ಬೇತೂರು, ರೇಖಾ ಬೇತೂರು, ರಾಜಶ್ರೀ, ದೀಪಾ ಕಿರಣ್, ನಾಗರತ್ನ, ಕವಿತಾ, ಸುಮಾ ರಾಜು, ದೀಪ ದೇವರಾಜ್, ಜ್ಯೋತಿ ಬಾದಾಮಿ, ಸುಮಾ ಕೊಟ್ರೇಶ್, ಚಂದ್ರಿಕಾ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.