ದಾವಣಗೆರೆ, ಏ.28- ತಾಲ್ಲೂಕಿನ ಸತ್ಯನಾರಾಯಣಪುರ ಕ್ಯಾಂಪ್ (ಕುಂದುವಾಡ ಕ್ಯಾಂಪ್) ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಭಾಗಿಯಾಗಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸತ್ಯನಾರಾಯಣ ಪುರ (ಕುಂದುವಾಡ ಕ್ಯಾಂಪ್) ದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ದೇವಸ್ಥಾನ ಮತ್ತು ಶ್ರೀ ಸೀತಾರಾಮ್, ಲಕ್ಷ್ಮಣ, ಹನುಮಂತ, ಶ್ರೀ ಮಹಾಗಣಪತಿ, ಮಹಾಲಕ್ಷ್ಮಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡಿದರು.