ಯುಪಿಎಸ್ಸಿ ರ‍್ಯಾಂಕ್ ವಿದ್ಯಾರ್ಥಿಗೆ ಸಿದ್ದೇಶ್ವರ ಅಭಿನಂದನೆ

ಯುಪಿಎಸ್ಸಿ ರ‍್ಯಾಂಕ್ ವಿದ್ಯಾರ್ಥಿಗೆ ಸಿದ್ದೇಶ್ವರ ಅಭಿನಂದನೆ

ದಾವಣಗೆರೆ, ಏ.18- ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 101ನೇ ರಾಂಕ್ ಪಡೆದು, ಕರ್ನಾಟಕ್ಕೆ 2ನೇ ರಾಂಕ್ ಪಡೆದಿರುವ ನಗರದ ಸೌಭಾಗ್ಯ ಬೀಳಗಿಮಠ ಅವರನ್ನು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸನ್ಮಾನಿಸಿ, ಗೌರವಿಸಿದರು.

ಸೌಭಾಗ್ಯ ಅವರ ನಿವಾಸಕ್ಕೆ ನಿನ್ನೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ ಸಂಸದರು, ನಿಮ್ಮ ಸಾಧನೆ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಸೌಭಾಗ್ಯ ತಂದೆ ಶರಣಯ್ಯ, ತಾಯಿ ಶರಣಮ್ಮ, ಬಿಜೆಪಿ ಮುಖಂಡರಾದ ಎನ್.ಎ. ಮುರುಗೇಶ್, ಬಾಡದ ಆನಂದರಾಜ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮತ್ತಿತರರು ಜೊತೆಯಲ್ಲಿದ್ದರು.

error: Content is protected !!