ದಾವಣಗೆರೆ, ಏ. 17 – 17 ಮತ್ತು 21ನೇ ವಾರ್ಡ್ನ ನಾಗರಿಕರಿಂದ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಇಂದು ಶ್ರೀ ರಾಮನವಮಿ ಪ್ರಯುಕ್ತ ಸಾರ್ವಜನಿಕರಿಗೆ ಕೋಸಂಬರಿ ಮತ್ತು ಪಾನಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್, ನಾಗೇಂದ್ರ ರೆಡ್ಡಿ, ಅಶ್ವಿನಿ ಪ್ರಶಾಂತ್, ಅವಿನಾಶ್, ಅಜಿತ್ ಆಲೂರು, ವಿನಾಯಕ, ಅಭಿ ಬೇತೂರು, ಕೇಶವ್, ಗಣೇಶ್, ಗೋಪಾಲ್, ಯುವರಾಜ್ ಉಪಸ್ಥಿತರಿದ್ದರು.