ಮಲೇಬೆನ್ನೂರು, ಏ. 17- ಸಮೀಪದ ಕೆ. ಎನ್. ಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಪ್ರಯುಕ್ತ ಸೀತಾರಾಮ ಕಲ್ಯಾಣ ಮಹೋತ್ಸವ ಮತ್ತು ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ರಥೋತ್ಸವ ಬುಧವಾರ ನಡೆದವು. ಬೆಳಿಗ್ಗೆ ಶ್ರೀರಾಮ ದೇವಸ್ಥಾನದಲ್ಲಿ ಶ್ರೀ ರಾಮ ದೇವರಿಗೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಿದ ನಂತರ ಬೆಳಗ್ಗೆ 9 ರಿಂದ ಶ್ರೀ ಆಂಜನೇಯ ಸ್ವಾಮಿಯ ಉಚ್ಛಾಯ ರಥೋತ್ಸವವು ಜರುಗಿತು. ಮಧ್ಯಾಹ್ನ 12 ಕ್ಕೆ ಸೀತಾರಾಮ ಕಲ್ಯಾಣ ಮಹೋತ್ಸವವು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
January 10, 2025