ಹೊನ್ನಾಳಿ, ಏ.14- ತಾಲ್ಲೂಕಿನ ಹಳೆದೇವರ ಹೊನ್ನಾಳಿ ಗ್ರಾಮ ದೇವರಾದ ಶ್ರೀ ಲಕ್ಷ್ಮೀಮಾಧವ ರಂಗನಾಥಸ್ವಾಮಿ ಮಹಾರಥೋತ್ಸವವು ಭಾನುವಾರ ಬೆಳಿಗಿನ ಜಾವ ಬೆಳಗ್ಗೆ 5.30 ರ ಬ್ರಾಹ್ಮೀ ಮುಹೂರ್ತದಲ್ಲಿ ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಕೃತಂತ್ರತಾ, ದ್ವಾಪರ ಕಲಿಯುಗದಲ್ಲಿ ಶ್ರೀರಂಗನಾಥಸ್ವಾಮಿ ಧರ್ಮ ಸ್ಥಾಪನೆಗಾಗಿ ದಶಾವತಾರಗಳಲ್ಲಿ ಸ್ವಾಮಿ ಮಹಿಮಂಡಲಕ್ಕೆ ಪ್ರಾಶಯವಾದ ಶ್ರೀ ಭರತ ಖಂಡದ ಹೆಮ್ಮೆ ಭೂಭಾಗದ ತಾಲ್ಲೂಕಿನ ಹಳೆದೇವರ ಹೊನ್ನಾಳಿ ಗ್ರಾಮ ತುಂಗಭದ್ರಾ ನದಿದಡದಲ್ಲಿರುವ ಈ ಗ್ರಾಮ ದೇವರಾದ ವೀರಾಜಮಾನರಾಗಿ ಶ್ರೀಲಕ್ಷ್ಮೀ ಮಾಧವ ರಂಗನಾಥಸ್ವಾಮಿ ಚಂದ್ರದರ್ಶನ ನಂತರ ಕಂಕಣಧಾರಣೆ ಕಾರ್ಯಕ್ರಮ ನೆರವೆರಿತು.
ನಂತರ ರಥಕ್ಕೆ ವಿವಿಧ ಬಣ್ಣದ ಬಾವುಟಗಳು ಮತ್ತು ಹೂವುಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ದೇವರನ್ನಿಟ್ಟು ರಥಕ್ಕೆ ಶಾಂತಿ ಪೂಜೆ ನಡೆಸಿ, ಅರ್ಚಕರಿಂದ ರಥಕ್ಕೆ ಪೂಜೆ ಮಾಡಿದ ನಂತರ ರಥವನ್ನು ಭಕ್ತ ಸಮೂಹ ಎಳೆದ ತಮ್ಮ ಭಕ್ತಿ ಸರ್ಮರ್ಪಿಸಿದರು.
ಕೆಲ ಭಕ್ತರು ರಥದ ಮೇಲೆ ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ ಮತ್ತಿತರ ವಸ್ತುಗಳನ್ನು ತೂರುತ್ತಾ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.
ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿ ಕೃತಾರ್ಥರಾದರು. ನಿನ್ನೆ ದೂಳೆ ಉತ್ಸವ ನಡೆಯಿತು. ಭಾನುವಾರ ಬೆಳಿಗ್ಗೆ ಕುದುರೆ ಉತ್ಸವ ಹಾಗೂ ಗಜ ಉತ್ಸವ ದಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆದವು. ಮಧ್ಯಾಹ್ನ ಓಕುಳಿ, ರಂಗದಾಟ, ಭೂತನಾಥನ ಬಾಳೆಹಣ್ಣಿನ ಸೇವೆ ವಿವಿಧ ವಾದ್ಯಗಳ ಮೂಲಕ ಅದ್ದೂರಿಯಾಗಿ ನಡೆಯಿತು.
ಎತ್ತಿನ ಬಂಡಿಯನ್ನು ಮತ್ತು ಎತ್ತುಗಳನ್ನು ಶೃಂಗರಿಸಿ, ಬಂಡಿಯನ್ನು ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಗೆಗೆ ನಡೆಸಿ, ಬೆಲ್ಲದ ನೀರನ್ನು ಬಂದಂತಹ ಭಕ್ತರಿಗೆ ವಿತರಿಸುವ ಕಾರ್ಯ ನಡೆಯಿತು.