ಏಳೂರು ಕರಿಯಮ್ಮ ದೇವಿಗೆ ಬೆಳ್ಳಿ ಕವಚ ಅರ್ಪಣೆ

ಏಳೂರು ಕರಿಯಮ್ಮ ದೇವಿಗೆ ಬೆಳ್ಳಿ ಕವಚ ಅರ್ಪಣೆ

ಮಲೇಬೆನ್ನೂರು, ಏ. 8- ಹಾಲಿವಾಣ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಗೆ ಸೋಮವಾರ ಭಕ್ತರು ಬೆಳ್ಳಿ ಕವಚ ಸಮರ್ಪಿಸಿದರು.

ಬೆಂಗಳೂರಿನಲ್ಲಿ ನೆಲೆಸಿರುವ ಹಾಲಿವಾಣ ಗ್ರಾಮದವರಾದ ಶ್ರೀಮತಿ ಭಾರತಮ್ಮ ಹೆಚ್.ಸಿ. ಬಸವರಾಜಪ್ಪ ಮತ್ತು ಸಂಗಡಿಗರು ಸೇರಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ 3 ಕೆ.ಜಿ. ತೂಕದ ಬೆಳ್ಳಿ ಕವಚವನ್ನು ತಯಾರಿಸಿಕೊಂಡು ಬಂದು ಶ್ರೀ ಏಳೂರು ಕರಿಯಮ್ಮ ದೇವಿಯ ಶಿಲಾಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಅರ್ಪಿಸಿದರು. ಅಲ್ಲದೇ, ಗ್ರಾಮದ ಒಳಿತಿಗಾಗಿ ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಚಂಡಿಕಾ ಹೋಮ ನಂತರ ದೇವಿಗೆ ಅಭಿಷೇಕ ಪೂಜೆ ಮಾಡಲಾಯಿತು.

ಈ ವೇಳೆ ಗ್ರಾಮದ ವತಿಯಿಂದ ದಾನಿಗಳಾದ ಶ್ರೀಮತಿ ಭಾರತಮ್ಮ ಮತ್ತು ಸಂಗಡಿಗರಿಗೆ ಗೌರವ ಸನ್ಮಾನ ಮಾಡಿ ಅಭಿನಂದಿಸಲಾಯಿತು.

ಜಾತ್ರೆ ಯಶಸ್ವಿಯಾಗಿ ಜರುಗಲು ಸಹಕರಿಸಿದ ಗ್ರಾಮಸ್ಥರಿಗೆ ಹಾಗೂ ಜಿಲ್ಲಾ, ತಾಲ್ಲೂಕು ಆಡಳಿತಕ್ಕೆ,  ಪೊಲೀಸ್ ಇಲಾಖೆಗೆ ಜಾತ್ರಾ ಸಮಿತಿ ಅಧ್ಯಕ್ಷರೂ ಆದ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ಅವರು   ಧನ್ಯವಾದ  ಹೇಳಿದರು.

ಗ್ರಾಮದ ಮುಖಂಡರಾದ ಕೆ.ಪಿ. ಕುಮಾರ ಸ್ವಾಮಿ, ಕೆ.ಎಂ. ಸಿದ್ದಯ್ಯ, ಎಸ್.ಜಿ.ಸಿದ್ದಪ್ಪ, ಕೆ. ರೇವಣಸಿದ್ದಪ್ಪ, ಟಿ. ಯೋಗೇಶ್, ಟಿ. ತಿಪ್ಪೇಶ್, ಬೂಸೇರ್ ಮಂಜಪ್ಪ, ಪೂಜಾರ್ ವಿಜಯ್, ಪೂಜಾರ್ ಮೋಹನ್, ಹೆಚ್. ನಾಗಪ್ಪ, ಗಂಗಾಮತ ಭರಮಪ್ಪ, ಎ.ಕೆ. ಆನಂದಪ್ಪ ಮೋಹನ್,  ಮಹದೇವಪ್ಪ, ಸಿದ್ದನಗೌಡ, ಮಹೇಶಪ್ಪ, ಹೊಳೆಯಪ್ಪ, ಕರಿಬಸಪ್ಪ, ಶಿವಕ್ಕಳ ಅಂಜನೇಯ ಸೇರಿದಂತೆ ಗ್ರಾಮಸ್ಥರು ಈ ವೇಳೆ ಹಾಜರಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!