ಹರಿಹರದಲ್ಲಿ ಜಗಜೀವನ್ ರಾವ್ ಜಯಂತಿ ಸರಳ ಆಚರಣೆ

ಹರಿಹರದಲ್ಲಿ ಜಗಜೀವನ್ ರಾವ್ ಜಯಂತಿ ಸರಳ ಆಚರಣೆ

ಹರಿಹರ, ಏ.5- ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ ರಾವ್ ರವರ ಜಯಂತಿಯನ್ನು ಸರಳವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್, ತಾ.ಪಂ ಇಓ ರಾಮಕೃಷ್ಣಪ್ಪ, ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ತಾಲ್ಲೂಕು ಆಡಳಿತ,  ತಾ.ಪಂ ಇಲಾಖೆ,  ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

error: Content is protected !!