ಹರಿಹರ, ಏ. 5 – ತಾ.ಪಂ. ಇಓ ಸುರೇಶ್ ಸುಲ್ಪಿ ಸುರಪುರತ ವ ಅವರು ಬೀದರ್ ಜಿಲ್ಲೆಯ ಬಸವ ಕಲ್ಯಾಣ ನಗರಕ್ಕೆ ವರ್ಗವಾಗಿದ್ದು, ತಾ.ಪಂ. ಸಿಬ್ಬಂದಿಗಳು ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಇವರ ಸ್ಥಾನಕ್ಕೆ ತಾತ್ಕಾಲಿಕವಾಗಿ ಯಾರನ್ನು ನಿಯೋಜಿಸಬೇಕು ಎಂಬುದನ್ನು ಜಿ.ಪಂ. ಸಿಓ ಸುರೇಶ್ ಇಟ್ನಾಳ ಕಾದಿರಿಸಿದ್ದಾರೆ ಎಂದು ತಿಳಿದು ಬಂದಿದೆ. ತಾ.ಪಂ. ಲೆಕ್ಕಾಧಿಕಾರಿ ಲಿಂಗಾರಾಜ್, ಕಿರಣ್ ಕುಮಾರ್, ಪೂಜಾ, ಸಿದ್ದೇಶ್ ಬಾತಿ ಇತರರು ಹಾಜರಿದ್ದರು.
January 11, 2025