ವಿದ್ಯಾರ್ಥಿ ಜೀವನದಲ್ಲಿ ಸ್ಫೂರ್ತಿ ಎಂಬುದು ಅಮೆಜಾನ್ ನದಿಯಂತೆ

ವಿದ್ಯಾರ್ಥಿ ಜೀವನದಲ್ಲಿ ಸ್ಫೂರ್ತಿ ಎಂಬುದು ಅಮೆಜಾನ್ ನದಿಯಂತೆ

ಕನ್ನಡ ಸಾಹಿತ್ಯ ಪರಿಷತ್ ದತ್ತಿ ಉಪನ್ಯಾಸದಲ್ಲಿ ಭರಮಪ್ಪ ಮೈಸೂರು  

ದಾವಣಗೆರೆ, ಏ. 4- ಸ್ಫೂರ್ತಿ ಎಂಬುದು ಅಮೆಜಾನ್ ನದಿ ಇದ್ದಂತೆ, ಎಲ್ಲಾ ವಿದ್ಯಾರ್ಥಿ ಗಳಲ್ಲಿಯೂ ಈ ಸ್ಫೂರ್ತಿಯು ಅಗಾಧವಾಗಿರುತ್ತದೆ. ವಿದ್ಯಾರ್ಥಿಗಳು ಯಾರೂ ದಡ್ಡರಲ್ಲ, ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಅಗಾಧವಾದ ಬುದ್ಧಿಶಕ್ತಿ ಇರುತ್ತದೆ. ಇರುವ ಶಕ್ತಿಯನ್ನು ಸ್ಪೂರ್ತಿ ಎಂದು ಈ ಸ್ಫೂರ್ತಿಯೊಂದಿಗೆ ಪ್ರೇರಣೆ, ನಂಬಿಕೆ, ಸಾಧನೆಗಳ ಮುಖಾಂತರ ತಮ್ಮ ಗುರಿಯನ್ನು ಸಾಧಿಸಬಹುದು ಎಂದು ನಿವೃತ್ತ ಶಿಕ್ಷಣಾಧಿಕಾರಿ ಭರಮಪ್ಪ ಮೈಸೂರು  ಪ್ರತಿಪಾದಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ನಾಗರಿಕರ ಸಹಾಯವಾಣಿ  ಇವರ ಸಹಯೋಗದಲ್ಲಿ ನಗರದ ಬ್ರಹ್ಮೀ ಅಕಾಡೆಮಿ ಕಾಲೇಜು ಆವರಣದಲ್ಲಿ ನಿನ್ನೆ ನಡೆದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರದ್ಧೆ ಯಶಸ್ಸಿನ ಕೀಲಿಕೈ ಕುರಿತು ದತ್ತಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

ಸಾಲಮರದ ತಿಮ್ಮಕ್ಕ, ಸರ್ ಸಿ.ವಿ. ರಾಮನ್, ಅಬ್ದುಲ್ ಕಲಾಂ, ಮುಂತಾದ ಹಲವಾರು ಸಾಧಕರ ಉದಾರಹಣೆಗಳನ್ನು ಕೊಡುತ್ತಾ ಮಕ್ಕಳು ಜಾಗೃತರಾಗಿ ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದನ್ನು ತಿಳಿಸಿದರು. ಎಲ್ಲಾ ಸಾಧಕರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ಎಲ್ಲಾ ವಿಷಯಗಳನ್ನು ಅರ್ಥೈಸಿಕೊಂಡು, ಮೇಲೆ ಬಂದರು ಎಂದು ತಿಳಿಸಿದರು.

ಹಿರಿಯ ಉಪನ್ಯಾಸಕರೂ, ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರೂ ಆದ ಶ್ರೀಮತಿ ಸುಮತಿ ಜಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಯವೆಂಬುದು ನಿಜವಾದ ಸಂಪತ್ತು ಇದ್ದ ಹಾಗೆ. ಆ ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಯಶಸ್ಸಿನ ಗುಟ್ಟಿರು ವುದು ಏಕಾಗ್ರತೆಯಲ್ಲಿ, ಏಕಾಗ್ರಗೊಂಡ ಮನಸ್ಸಿಗೆ ಅಪಾರ ಶಕ್ತಿ ಇರುತ್ತದೆ. ಆತ್ಮವಿಶ್ವಾಸ ವಿಲ್ಲದವರು ಪರಾವಲಂಬಿಗಳಾಗುತ್ತಾರೆ. ಹಾಗಾಗಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನನ್ನಿಂದ ಸಾಧ್ಯ, ನಾನು ಓದಬಲ್ಲೆ, ನಾನು ಹೆಚ್ಚು ಅಂಕ ತೆಗೆಯಬಲ್ಲೆ ಎಂಬ ದೃಢವಾದ ಆತ್ಮವಿಶ್ವಾಸ ನಿಮ್ಮಲ್ಲಿರಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ
ಉಪ ನ್ಯಾಸಕ ಮಧುಸೂದನ್ ಅವರು, ವಿದ್ಯಾರ್ಥಿಗಳು ಶಿಸ್ತಿನ ಜೀವನವನ್ನು ನಡೆಸಿ ಬದುಕನ್ನು ಸುಂದರ ಗೊಳಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ರೇಖಾ ಓಂಕಾರಪ್ಪ, ಶ್ರೀಮತಿ ಎ.ಎಲ್. ನಾಗವೇಣಿ ಉಪಸ್ಥಿತರಿದ್ದರು. ಕಸಾಪ ನಿರ್ದೇಶಕ ಎ.ಎಂ. ಸಿದ್ದೇಶ್ ಕುರ್ಕಿ   ಸ್ವಾಗತಿಸಿದರು. 

ಕಸಾಪ ನಿರ್ದೇಶಕ ಆರ್. ಶಿವಕುಮಾರ್ ನಿರೂಪಿಸಿದರು. ಕಸಾಪ ನಿರ್ದೇಶಕಿ ಶ್ರೀಮತಿ ಕೆ.ಜೆ. ಸೌಭಾಗ್ಯ   ವಂದಿಸಿದರು.

error: Content is protected !!