ಸಮಾಜದ ಒಳಿತಿಗಾಗಿ ಪುಣ್ಯದ ಕೆಲಸ ಮಾಡಿದಾಗ ಉನ್ನತ ಫಲ ಪ್ರಾಪ್ತಿ

ಸಮಾಜದ ಒಳಿತಿಗಾಗಿ ಪುಣ್ಯದ ಕೆಲಸ ಮಾಡಿದಾಗ ಉನ್ನತ ಫಲ ಪ್ರಾಪ್ತಿ

ಹರಿಹರದ ಕಾರ್ಯಕ್ರಮದಲ್ಲಿ ಕುರುಹಿನಶೆಟ್ಟಿ ಸಮಾಜದ ಜಗದ್ಗುರು ಶ್ರೀ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮೀಜಿ ಪ್ರತಿಪಾದನೆ

ಹರಿಹರ, ಏ.4- ಸಮಾಜದ ಒಳಿತಿಗಾಗಿ ಪುಣ್ಯದ ಕೆಲಸ ಮಾಡಿದಾಗ, ದೇವರು ಉನ್ನತ  ಫಲಗಳನ್ನು ನೀಡುತ್ತಾನೆ ಎಂದು ಕುರುಹಿನಶೆಟ್ಟಿ ಸಮಾಜದ ಜಗದ್ಗುರು ಶ್ರೀ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಮೆಟ್ಟಿಲು ಹೊಳೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಶಿ ನೀಲಕಂಠೇಶ್ವರ, ನಂದಿ, ಗಣಪತಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. 

ಕಳೆದ ಹಲವು ವರ್ಷಗಳ ಹಿಂದೆ ದೇವ ರುಗಳ ಬಗ್ಗೆ ನಿರ್ಲಕ್ಷ್ಯ, ಅಸಡ್ಡೆ ಮನೋಭಾವ ಜನರಲ್ಲಿ ಕಾಣುವಂತಹ ಪರಿಸ್ಥಿತಿ ನಿರ್ಮಾಣ ಹಂತಕ್ಕೆ ಹೋಗಿತ್ತು. ಕಾರಣ ಜನರಿಗೆ ನಾವು ಏನು ಮಾಡಿದರೂ ಅದನ್ನು ದಕ್ಕಿಸಿಕೊಳ್ಳಬಹುದು ಎಂಬ ಉದ್ಧಟತನದ ಮನೋಭಾವ ಹೆಚ್ಚಾಗಿದ್ದರಿಂದ, ಆ ಹಂತಕ್ಕೆ ಹೋಗಲು ಕಾರಣವಾಗಿತ್ತು ಎಂದರು.

ಆದರೆ ಕಳೆದ ಎರಡು ವರ್ಷಗಳ ಹಿಂದೆ ಬಂದಂತಹ ಕೊರೋನದ ಛಾಯೆ ಮತ್ತೆ ದೇವರು ಹಾಗೂ ಅಧ್ಯಾತ್ಮದ ಕಡೆಗೆ ಜನರನ್ನು ತಿರುಗುವಂತೆ ಮಾಡಿತು. ಇಂದಿನ ಕಾಲಘಟ್ಟದಲ್ಲಿ ಮನುಷ್ಯನಿಗೆ ಹಣ, ಆಸ್ತಿ, ಅಂತಸ್ತು  ಸೇರಿದಂತೆ ಎಲ್ಲಾ ಬಗೆಯ ವೈಭೋಗದ ಜೀವನ ನಡೆಸಲು ಬಹಳಷ್ಟು ಅನುಕೂಲವಿದೆ. ಆದರೆ  ಮನಸ್ಸಿನಲ್ಲಿ ಕಳವಳಗಳು ಹೆಚ್ಚಾಗಿ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಮನುಷ್ಯರು ನೆಮ್ಮದಿ ಜೀವನ ನಡೆಸುವುದಕ್ಕೆ ದೇವರು ಮತ್ತು ಅಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವನ್ನು ಹೊಂದಿದಾಗ, ಮನೆಯಲ್ಲಿ ಶಾಂತಿ ಲಭಿಸುವುದರೊಂದಿಗೆ, ಎಲ್ಲಾ ರೀತಿಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಕುರುಹಿನಶೆಟ್ಟಿ ಸಮಾಜ ಬಹಳ ಚಿಕ್ಕ ಸಮಾಜವಾಗಿದ್ದರೂ ಸಹ, ಸಮಾಜದಲ್ಲಿ ಒಂದು ಗೌರವಯುತವಾದ ಸಮಾಜವಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣ ಪೂರ್ವಜರ ನಡೆ,ನುಡಿ, ಶಿಸ್ತು, ಸಂಯಮ ಕಾರಣವಾಗಿದೆ. ಇದನ್ನು ಇಂದಿನ ಯುವಕರು, ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಬೇಕು ಎಂದು ಕರೆ ನೀಡಿದರು.

ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣ, ಸಂಸ್ಕಾರ ಕೊಡಿಸಿ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವಂತೆ ಮಾಡಬೇಕು ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ಹನಗವಾಡಿ ಎಸ್.ಎಂ. ವೀರೇಶ್, ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿ. ರೇವಣಸಿದ್ದಪ್ಪ, ಪತ್ರಕರ್ತ ಎಂ. ಚಿದಾ ನಂದ ಕಂಚಿಕೇರಿ, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ಕಾಂಗ್ರೆಸ್ ಮುಖಂಡ ಕಿರಣ್ ಭೂತೆ ಇತರರನ್ನು ಸನ್ಮಾನಿಸಲಾಯಿತು.

ಕುರುಹಿನಶೆಟ್ಟಿ ಸಮಾಜದ ಗೌರವ ಅಧ್ಯಕ್ಷರಾದ ನಾಗರಾಜ್ ಭಂಡಾರಿ, ದೇವೇಂದ್ರಪ್ಪ ಮ್ಯಾಳ, ಅಧ್ಯಕ್ಷ ಬಸವರಾಜ್ ನಾಗಪ್ಪ ಇಂಡಿ, ಉಪಾಧ್ಯಕ್ಷರಾದ ಪುಟ್ಟಪ್ಪ ಬುಟ್ಟ, ನಾಗರಾಜ್ ಬುಟ್ಟಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಅಮ್ರದ್, ಸಹ ಕಾರ್ಯದರ್ಶಿ ಮಂಜುನಾಥ್ ಗಡದ್, ಖಜಾಂಚಿ ನಿಂಗರಾಜ್ ದಾವಣಗೆರೆ, ಜಂಟಿ ಖಜಾಂಚಿ ರಾಜು ಐರಣಿ, ಅಣ್ಣಪ್ಪ ಶಾವಿ,  ಮಹಿಳಾ ಘಟಕದ ಪದಾಧಿಕಾರಿಗಳಾದ ಗೌರವ ಅಧ್ಯಕ್ಷೆ ಉಮಾ ಗಂಗಾಧರ ದಾವಣಗೆರೆ, ಅಧ್ಯಕ್ಷೆ ಸರಸ್ವತಿ ಕೊಟ್ರೇಶಪ್ಪ ಐರಣಿ, ಉಪಾಧ್ಯಕ್ಷೆ ಅಮಿತಾ ಶ್ರೀನಿವಾಸ್ ಇಂಡಿ, ಕಾರ್ಯದರ್ಶಿ ರೇಖಾ ಬಸವರಾಜ್ ಶಾವಿ, ಸಹ ಕಾರ್ಯದರ್ಶಿ ಸ್ನೇಹ ನಾಗರಾಜ್ ಬಳ್ಳಾರಿ, ಖಜಾಂಚಿ ಭಾರತಿ ಅಣ್ಣಪ್ಪ ಶಾವಿ, ನಿರ್ದೇಶಕರಾದ ಸಾವಿತ್ರಮ್ಮ ಶಾಂತಪ್ಪ ಸಕ್ರಿಗಡ್ಡಿ, ಸುಜಾತ ಚಂದ್ರಶೇಖರ್ ಅಮ್ರದ್, ರಾಧಾ ಹನುಮಂತಪ್ಪ ತಂಬ್ರಳ್ಳಿ, ವಿದ್ಯಾ ಮಂಜುನಾಥ್ ಗಡ್ಡದ್, ರೋಹಿಣಿ ರಾಜು ಐರಣಿ, ಸುಮ ಪರಶುರಾಮ್ ಬುಟ್ಟ ಇತರರು ಹಾಜರಿದ್ದರು.

error: Content is protected !!