ಜಿಎಂಐಟಿಯಲ್ಲಿ ಪೇಪಾಲ್ ಕಂಪನಿ ಕೇಂದ್ರ ಆರಂಭ

ಜಿಎಂಐಟಿಯಲ್ಲಿ ಪೇಪಾಲ್ ಕಂಪನಿ ಕೇಂದ್ರ ಆರಂಭ

ದಾವಣಗೆರೆ,ಏ.4- ನಗರದ   ಜಿಎಂ ತಾಂತ್ರಿಕ  ಮಹಾವಿದ್ಯಾಲಯದ  ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ  ಐಸಿಟಿ  ಅಕಾಡೆಮಿ ವತಿಯಿಂದ  ಪೇಪಾಲ್ ಕಂಪನಿಯ ಶ್ರೇಷ್ಠತಾ ಕೇಂದ್ರದ  ಉದ್ಘಾಟನೆ  ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಿ. ಸಂಜಯ್ ಪಾಂಡೆ  ಮಾತನಾಡಿ, ನುರಿತ ತಜ್ಞರುಗಳು ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು.

ಐಸಿಟಿ ಅಕಾಡೆಮಿ  ಸಹಾಯಕ ಮುಖ್ಯ ವ್ಯವಸ್ಥಾಪಕ ವಿಷ್ಣು ಪ್ರಸಾದ್  ಉದ್ಘಾಟನೆ  ನೆರವೇರಿಸಿ, ಒಟ್ಟು 110 ವಿದ್ಯಾರ್ಥಿನಿಯರು ವಿವಿಧ ವಿಭಾಗಗಳಿಂದ ಹೆಸರನ್ನು ನೋಂದಾಯಿಸಿದ್ದು,  ಇದು 100 ಗಂಟೆಗಳು ಸೈಬರ್ ಸೆಕ್ಯೂರಿಟಿ ಮತ್ತು 40 ಗಂಟೆಗಳು ಸಾಫ್ಟ್ ಸ್ಕಿಲ್ಸ್ ತರಬೇತಿ ಸಂಪೂರ್ಣ ಆಫ್ಲೈನ್  ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಜಿಎಂಐಟಿ ಕಾಲೇಜು ವಿವಿಧ ಪ್ರತಿಷ್ಠಿತ ಕಂಪನಿಗಳೊಡನೆ ಒಡಂಬಡಿಕೆ ಮಾಡಿಕೊಂಡಿದ್ದು,  ಆ ಮೂಲಕ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಕೈಗಾರಿಕಾ ತರಬೇತಿಯನ್ನು ನೀಡುತ್ತಿದ್ದು, ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುತ್ತಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ   ಟಿ. ಆರ್. ತೇಜಸ್ವಿ ಕಟ್ಟಿಮನಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಐಸಿಟಿ ಅಕಾಡೆಮಿ ದಾವಣಗೆರೆ ವಿಭಾಗದ ಸಂಯೋಜಕ   ಜಕಾವುಲ್ಲ, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ  ಡಾ. ಬಿ. ಎನ್. ವೀರಪ್ಪ, ವಿಭಾಗದ ಪ್ಲೇಸ್ಮೆಂಟ್ ಸಂಯೋಜಕರಾದ  ಪ್ರೊ. ಕಾವ್ಯಶ್ರೀ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!