ಶ್ರೀ ಕ್ಷೇತ್ರಕ್ಕೆ ಕರ್ಕಿ ಮಠಕ್ಕೆ ಉತ್ತರಾಧಿಕಾರಿ ನೇಮಕ

ಶ್ರೀ ಕ್ಷೇತ್ರಕ್ಕೆ ಕರ್ಕಿ ಮಠಕ್ಕೆ ಉತ್ತರಾಧಿಕಾರಿ ನೇಮಕ

ದಾವಣಗೆರೆ, ಏ.2- ಶ್ರೀ ಕ್ಷೇತ್ರ ಕರ್ಕಿಯಲ್ಲಿರುವ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಶ್ರೀ ಜ್ಞಾನೇಶ್ವರಿ ಪೀಠ – ದೈವಜ್ಞ ಬ್ರಾಹ್ಮಣ ಮಠದ ಉತ್ತರಾಧಿಕಾರಿಯಾಗಿ ವೇ. ಕನ್ಹಯ್ಯ ಗುರುನಾಥ ನೇತಲ್ಕರ್ ನೇಮಕಗೊಂಡಿದ್ದಾರೆ. 

ಪೀಠದ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿಯವರು ಈ ನೇಮಕ ಮಾಡಿದ್ದಾರೆ.

ನಾಳೆ ದಿನಾಂಕ 3ರ ಬುಧವಾರ ಶ್ರೀ ಕ್ಷೇತ್ರ ಕರ್ಕಿಯಲ್ಲಿ ಏರ್ಪಾಡಾಗಿರುವ ಕಾರ್ಯಕ್ರಮದಲ್ಲಿ ವೇ. ಕನ್ಹಯ್ಯ ಗುರುನಾಥ ನೇತಲ್ಕರ್ ಅವರು ಪೀಠದ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿದ್ದಾರೆ.

 ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಭಾಗವಹಿಸುವಂತೆ ದಾವಣಗೆರೆ ದೈವಜ್ಞ ಸಮಾಜದ ಅಧ್ಯಕ್ಷರೂ ಆಗಿರುವ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪ್ರಶಾಂತ್ ವಿ. ವೆರ್ಣೇಕರ್ ಕೋರಿದ್ದಾರೆ.

error: Content is protected !!