ಹರಿಹರ, ಏ. 3 – ನಗರದ ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿಂದು ಹರಿಹರ ನಗರ ಭಾಗದ ಕಡಿಮೆ ಮತದಾನವಾಗಿರುವ ಬೂತ್ ಮಟ್ಟದ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾ ಯ್ತಿಯ ಎಲ್ಲಾ ಅಧಿಕಾರಿ ನೌಕರರೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮದ ನಿಮಿತ್ತ ಪ್ರತಿಜ್ಞಾ ವಿಧಿ ಬೋಧನೆ ಮತ್ತು ಸಹಿ ಸಂಗ್ರಹ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಐಗೂರು ಬಸವರಾಜ್, ತಾ.ಪಂ. ಇಓ ರಾಮಕೃಷ್ಣಪ್ಪ, ಸಿಡಿಪಿಓ ಪೂರ್ಣಿಮಾ, ನಗರ ಸಭೆ ಮ್ಯಾನೇಜರ್ ಶಿವಕುಮಾರ್, ತಾ.ಪಂ. ಅಧಿಕಾರಿ ಪೂಜಾ, ಕೊಟ್ರಮ್ಮ, ಮಮತಾ, ವೀಣಾ, ಲತಾ, ಲಕ್ಷ್ಮಣ, ಬಿಎಲ್ಓ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು ಇತರರು ಹಾಜರಿದ್ದರು.
January 15, 2025