ದಾವಣಗೆರೆ, ಏ.3- ಇಲ್ಲಿನ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಿದರು. ಮಹಿಳೆಯರ ಕೌಶಲ್ಯಗಳಿಗೆ ಬೇಕಾಗುವ ತಂತ್ರಜ್ಞಾನ ಮತ್ತು ಇತರೆ ಸಲಕರಣೆಗಳನ್ನು ಒದಗಿಸಿದಾಗ ದೇಶದಲ್ಲಿನ ಶೇ. 50ರಷ್ಟು ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಪದ್ಮಶ್ರೀ ಪುರಸ್ಕತ ನಿಲೀಮ ಮಿಶ್ರ ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್, ಮಧು, ಜೆ. ನಟರಾಜ್, ಸಲಹೆಗಾರ ಡಾ. ಮಂಜಪ್ಪ ಸಾರಥಿ ಮತ್ತುಇತರರಿದ್ದರು.
January 16, 2025