ಹರಿಹರ, ಏ.1 – ನಗರದ ಹೊರವಲಯದ ಬನ್ನಿಕೋಡು ಗ್ರಾಮದಲ್ಲಿ ಮಾಜಿ ಸಚಿವ ಹೆಚ್. ಶಿವಪ್ಪನವರ 87ನೇ ಜನ್ಮ ದಿನದ ಅಂಗವಾಗಿ ಅವರ ಸಮಾಧಿಗೆ ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವನಮಾಲ ಹೆಚ್. ಶಿವಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಹೆಚ್.ಎಸ್. ಅರವಿಂದ್, ಹೆಚ್.ಎಸ್. ನಾಗರಾಜ್, ಚಿದಾನಂದಪ್ಪ, ದೀಟೂರು ಶೇಖರಪ್ಪ, ಬನ್ನಿಕೋಡು ಬಸವರಾಜ್, ಪರಮೇಶ್ವರಗೌಡ್ರು, ನಗರಸಭೆ ಸದಸ್ಯೆ ಉಷಾ ಮಂಜುನಾಥ್, ಪಿ.ಎನ್. ವಿರುಪಾಕ್ಷಪ್ಪ, ಬಿ. ಅಲ್ತಾಫ್, ಆರ್.ಸಿ. ಜಾವೇದ್, ಮುಖಂಡರಾದ ಅಮರಾವತಿ ನಾಗರಾಜ್, ಅಡಕಿ ಕುಮಾರ್ ಇತರರು ಉಪಸ್ಥಿತರಿದ್ದರು.