ದಾವಣಗೆರೆ, ಏ.1- ಆತ್ಮಿ ಸಂಸ್ಥೆ ಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತದ ರಾಜ್ಯಗಳ ಸಾಂಪ್ರದಾಯಿಕ ವೇಷಭೂಷಣ ಸ್ಪರ್ಧೆಯನ್ನು ವಿವಿಧ ಸಂಘ-ಸಂಸ್ಥೆಗಳಿಂದ ಬಂದಂತಹ ಮಹಿಳೆಯರಿಗೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದ ಅಥಣಿ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸೌಮ್ಯ ಬಿ. ಸ್ತ್ರೀಯರ ಹಕ್ಕು-ಬಾಧ್ಯತೆಗಳ ಕುರಿತು ಮಾತನಾಡಿದರು.
ಅಧ್ಯಕ್ಷರಾದ ಶ್ರೀಮತಿ ಪ್ರಸನ್ನ. ಬಿ, ಕಾರ್ಯದರ್ಶಿ ಶೋಭಶಿವರಾಜ್, ಖಜಾಂಚಿ ಶ್ರೀಮತಿ ಶ್ರೀ ಲಕ್ಷ್ಮಿ ಅಜಿತ್, ಉಪಾಧ್ಯಕ್ಷೆ ಶ್ರೀಮತಿ ನಂದಿನಿ ಗಂಗಾಧರ್, ಸಹಕಾರ್ಯ ದರ್ಶಿ ಶ್ರೀಮತಿ ನೀತಾ ವಿ. ಅಂಬರ್ಕರ್, ಶ್ರೀಮತಿ ಫಲ್ಗುಣಿ ಠಕ್ಕರ್, ಬಿ. ಸಂಗೀತಾ ದಯಾನಂದ್, ರೋಶಿನಿ ವಿನೋದ್, ಸುಲೋಚನ ಸತೀಶ್, ಶಾಂತಲಾ ಉಮಾಪತಿ, ಆಶಾ ನಾಯಕ್, ಮಧು ಜಿಂಗಾಡೆ, ಪ್ರಿಯಾಂಕ ಗುಜ್ಜರ್ ಉಪಸ್ಥಿತರಿದ್ದರು.