ದಾವಣಗೆರೆ, ಏ. 1 – ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಹಾರಾಷ್ಟ್ರ ರಾಜ್ಯದ ಪರೋಲ ಗ್ರಾಮದ ಮಹಿಳಾ ಸಬಲೀಕರಣದಲ್ಲಿ ಪ್ರಖ್ಯಾತಿಯಾಗಿರುವ ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕೃತ ಪದ್ಮಶ್ರೀ ನಿಲೀಮ ಮಿಶ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ, ತಮ್ಮ ಜೀವನದ ಅನುಭವ ಮತ್ತು ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡಾಗ ಆದ ಸಾಮಾಜಿಕ ಪರಿವರ್ತನೆಯನ್ನು ಚಿತ್ರಗಳ ಮೂಲಕ ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್, ಜೈನ್ ಗ್ರೂಪ್ಸ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಲಹೆಗಾರರಾದ ಡಾ. ಮಂಜಪ್ಪ ಸಾರಥಿ, ಪ್ರೊ. ಮಧು, ಪ್ರೊ. ನಟರಾಜ್ ಜೆ. ಇತರರು ಹಾಜರಿದ್ದರು.