ಜಿಎಂ ವಿವಿಯ `ಆವಿಷ್ಕಾರದ ವಾರ’ ಕಾರ್ಯಕ್ರಮದಲ್ಲಿ ಕುಲಪತಿ ಜಿ.ಎಂ.ಲಿಂಗರಾಜು
ದಾವಣಗೆರೆ, ಮಾ.31- ಮುಂದುವರೆಯುತ್ತಿರುವ ಜಗತ್ತಿನಲ್ಲಿ ಆವಿಷ್ಕಾರ ಮತ್ತು ಸಂಶೋಧನೆ ಮತ್ತು ಅವುಗಳ ಅಗತ್ಯಗಳ ಬಗ್ಗೆ ಜಾಗೃತಿ ಇರಬೇಕು ಎಂಬುದಾಗಿ ಜಿಎಂ ವಿಶ್ವ ವಿದ್ಯಾಲಯದ ಕುಲಪತಿ ಜಿ.ಎಂ. ಲಿಂಗರಾಜು ಹೇಳಿದರು.
ನಗರದ ಜಿ.ಎಂ. ವಿಶ್ವವಿದ್ಯಾಲ ಯದಲ್ಲಿ ಹಬ್ಬದ ವಾತಾವರಣ ದಲ್ಲಿ ನಡೆದ ಆವಿಷ್ಕಾರದ ವಾರ (ಇನ್ನೋ ವೇಷನ್ ವೀಕ್) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಜಿಎಂ ಐಪಿಎಸ್ಆರ್ ಕಾಲೇಜಿನ ಫಾರ್ಮಕಾ ಗ್ನೋಸಿ ವಿಭಾಗದ ಡಾ. ಅಮಿತ್ ಕುಮಾರ್ ಬಿ ನೆರವೇರಿಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಉಪಕುಲಪತಿ ಡಾ. ಎಸ್. ಆರ್. ಶಂಕಪಾಲ್ ಹಾಗೂ ಅತಿಥಿಗಳಾಗಿ ಆರ್ಕ್ಸ್ ಕಂಪನಿಯ ಸಿಇಓ ಡಾ. ಡಿ. ಎಂ. ಶಿವಣ್ಣ ಮತ್ತು ಇನ್ನೋಮಂತ್ರ ಕಂಪನಿ ಸಿಇಓ ಲೋಕೇಶ್ ವೆಂಕಟಸ್ವಾಮಿ, ಶ್ರೀ ಶೈಲ ಟ್ರಸ್ಟ್ನ ಟ್ರಸ್ಟಿ ಜಿ. ಎಸ್. ಅನಿತ್ ಕುಮಾರ್, ಸಹ ಉಪಕುಲಪತಿ ಡಾ.ಎಚ್. ಡಿ. ಮಹೇಶಪ್ಪ ಉಪಸ್ಥಿತರಿದ್ದರು.
ಜಿಎಂ ವಿಶ್ವವಿದ್ಯಾಲಯದ ಇನ್ನೋ ವೇಟಿವ್ ವಿಭಾಗದ ನಿರ್ದೇಶಕ ಡಾ. ಗಿರೀಶ್ ಬೋಳಕಟ್ಟಿ ಸ್ವಾಗತಿಸಿದರು.
ಸಂಶೋಧನಾ ನಿರ್ದೇಶಕ ಡಾ. ನಾಗಲಿಂಗಪ್ಪ ಅವರು ಮಾತನಾಡಿ, ಆವಿಷ್ಕಾರ ಮತ್ತು ಸಂಶೋ ಧನೆಯು ಎಲ್ಲಾ ವಿಭಾಗದ ಶಿಕ್ಷಣ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಲ್ಲಿ ಭಾರತ ಅತ್ಯುನ್ನತವಾಗಿ ಮೇಲೇರಬಹುದು ಎಂದು ಹೇಳಿದರು. ಇಡೀ ವಾರ ಸಂಶೋಧನೆಯ ಪ್ರಾಮುಖ್ಯತೆ ಯನ್ನೂ ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡಿಕೊಡಲಾ ಯಿತು. ಐಚ್ಚಿಕ, ಆವಿಷ್ಕರಣೆಯಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನೂ ಆಯೋಜಿಸಲಾ ಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಬಹುಮಾನದ ರೂಪದಲ್ಲಿ ಹತ್ತು ಸಾವಿರ ಹಾಗೂ ಐದು ಸಾವಿರ ರೂ. ನಗದು ಬಹು ಮಾನವನ್ನು ವಿತರಿಸಲಾಯಿತು.
ಇಂಜಿನಿಯರಿಂಗ್ ವಿಭಾಗದಲ್ಲಿ ಚಂದನ ಮತ್ತು ತಂಡ ಪ್ರಥಮ ಸ್ಥಾನ ಹಾಗೂ ಶಶಾಂಕ್ ಮತ್ತು ತಂಡ ದ್ವಿತೀಯ ಸ್ಥಾನ. ಎಂಬಿಎ ವಿಭಾಗದಲ್ಲಿ ಹರ್ಷಿತಾ ವಿ. ಮತ್ತು ತಂಡ ಪ್ರಥಮ ಸ್ಥಾನ ಹಾಗೂ ನೂತನ ಡಿ. ಆರ್. ಮತ್ತು ತಂಡ ದ್ವಿತೀಯ ಸ್ಥಾನ, ಫಾರ್ಮಸಿ ಹಾಗೂ ಬಿಸಿಎ ವಿಭಾಗದಿಂದ ಗಗನಶ್ರೀ ಮತ್ತು ತಂಡ ಪ್ರಥಮ ಹಾಗೂ ಮಧು ಹೆಚ್ ನಾಗಪ್ಪನವರ್ ಮತ್ತು ತಂಡ ದ್ವಿತೀಯ ಸ್ಥಾನ ಪಡೆದರು.